ಶಿವಕುಮಾರ್ ಮಾವಲಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿಯವರು. ಶಿವಮೊಗ್ಗದ ಡಿ.ವಿ.ಎಸ್. ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ.
ಸದ್ಯ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್ ಪ್ರತಿಭಾವಂತ ಬರಹಗಾರ. ಕಥೆ, ಕವಿತೆ, ನಾಟಕ ಹೀಗೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಶಿವಕುಮಾರ್ ಅವರ ಮೊದಲ ಕಥಾಸಂಕಲನ ‘ದೇವರು ಅರೆಸ್ಟ್ ಆದ’ ಅವರ ‘ಸುಪಾರಿ ಕೊಲೆ’ ನಾಟಕ ಸಿನಿಮವಾಗುತ್ತಿದೆ. ಅವರ ಇತ್ತೀಚಿನ ಪುಸ್ತಕ ಟೈಪಿಸ್ಟ್ ತಿರಸ್ಕರಿಸಿದ ಕಥೆ. ಈ ಕೃತಿಯನ್ನು ಬಹುರೂಪಿ ಪ್ರಕಾಶನ ಪ್ರಕಟಿಸಿದೆ.
'ಝೂಮ್ with ಬುಕ್ ಬ್ರಹ್ಮ' ಕಾರ್ಯಕ್ರಮದಲ್ಲಿ ಲೇಖಕ, ಕತೆಗಾರ ಶಿವಕುಮಾರ್ ಮಾವಲಿ ಅವರು ವೃತ್ತಿ ಬದುಕಿನ ಜೊತೆಗೆ ಸಾಹಿತ್ಯ ರಂಗದಲ್ಲಿ ಕ್ರಿಯಾಶೀಲರಾಗಿ ಹಾಗೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಅನುಭವಗಳನ್ನು ಹಂಚಿಕೊಂಡಿದ್ದಾರೆ.