ಶಶಿಕಿರಣ್ ಶೆಟ್ಟಿಯವರು ಉಡುಪಿಯ ಕೊಳಲಗಿರಿಯವರು. ಉಡುಪಿಯ ಎಸ್.ಡಿ.ಮ್. ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ಪದವಿಯನ್ನು ಪಡೆದು ಎಸ್.ಡಿ.ಮ್. ಆಯುರ್ವೇದ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯಕೀಯ ವ್ಯಾಸಂಗ ಮುಗಿಸಿ, ಪ್ರಸ್ತುತ ಉಡುಪಿಯ ಕೊಳಲಗಿರಿಯಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದಾರೆ. ಜೊತೆಗೆ, ಜನ ಸೇವೆಗಾಗಿ ಹೋಂ ಡಾಕ್ಟರ್ ಫೌಂಡೇಶನ್ (ರಿ.) ಸಂಸ್ಥೆಯೊಂದನ್ನು ಸ್ಥಾಪಿಸಿ ತನ್ನ ಹುಟ್ಟೂರಿನ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ `ಎಮಿನೆಂಟ್ ಬಂಟ್ ಪರ್ಸನಾಲಿಟಿ ಪ್ರಶಸ್ತಿ’ ಬಂದಿದೆ.
ಬರವಣಿಗೆ ಇವರ ನೆಚ್ಚಿನ ಹವ್ಯಾಸ. ವೃತ್ತಿಯ ಜೊತೆಜೊತೆಗೇ ಹಲವಾರು ಕತೆಗಳನ್ನು ಬರೆದಿದ್ದಾರೆ. ಅವೆಲ್ಲವನ್ನೂ ಒಟ್ಟುಗೂಡಿಸಿ 'ಬದುಕ ಬದಲಿಸುವ ಕತೆಗಳುʼ ಎನ್ನುವ ಕತಾಸಂಕಲ ಕೃತಿಯನ್ನು ಹೊರತಂದಿದ್ಧಾರೆ.