ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆರಗೋಡು ಗ್ರಾಮದ ಅರಗೋಡು ಸುರೇಶ ಶೆಣೈ 1966 ರ ಜೂನ್10ರಂದು ಜನಿಸಿದರು. ಧಾರವಾಡಕ್ಕೆ ಆಗಮನ. 1986ರಲ್ಲಿ ಆಶಾಜನಕ ಎಂಬ ಕನ್ನಡ ಸಾಪ್ತಾಹಿಕದ ಮೂಲಕ ಪತ್ರಿಕಾ ಕ್ಷೇತ್ರ ಪ್ರವೇಶಿಸಿದರು. ಕೈಗನ್ನಡಿ ಪತ್ರಿಕೆಯಲ್ಲಿ ವ್ಯವಸ್ಥಾಪಕ ಸಂಪಾದಕರಾಗಿದ್ದರು. 1989ರಲ್ಲಿ `ಸರಸ್ವತಿ ಪ್ರಭಾ'' ಎಂಬ ಕನ್ನಡ ಲಿಪಿಯಲ್ಲಿ ಕೊಂಕಣಿ ಪತ್ರಿಕೆಯ ಆರಂಭ. ಕಳೆದ 31 ವರ್ಷಗಳಿಂದ ಒಂದೇ ಒಂದು ಸಂಚಿಕೆಯು ಸಹ ವ್ಯತ್ಯಯವಾಗದೇ ನಿರಂತರ ಪ್ರಕಟಣೆ. ಸಮಗ್ರ ಉತ್ತರ ಕರ್ನಾಟಕದಲ್ಲಿಯೇ ಇಷ್ಟೊಂದು ಸುದೀರ್ಘ ಕಾಲ ಪ್ರಕಟಗೊಂಡ ಏಕ ಮಾತ್ರ ಕೊಂಕಣಿ ಪತ್ರಿಕೆ ಎಂಬ ಹೆಗ್ಗಳಿಕೆ. ಕೊಂಕಣಿಯಲ್ಲಿ 20ಕ್ಕಿಂತ ಅಧಿಕ ಕೃತಿಗಳ ರಚನೆ ಹಾಗೂ ಪ್ರಕಟಣೆ. ಈ ಸಾಧನೆಗಾಗಿ `ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ `ಕೊಂಕಣಿ ಸಾಧಕರು' ಎಂಬ ಪುರಸ್ಕಾರ ದೊರೆತಿದೆ. ಕನ್ನಡದಲ್ಲಿ 2018ರಲ್ಲಿ `ಅನ್ನ ನುಂಗಿದ ಕೈ' ಕನ್ನಡ ಕಥಾ ಸಂಕಲನ ಪ್ರಕಟಣೆ. ಕೊಂಕಣಿಯಲ್ಲಿ 300 ಕ್ಕಿಂತ ಅಧಿಕ ಕತೆಗಳು, 5-6 ಕಾದಂಬರಿಗಳು ಸೇರಿ ಐದು ಸಾವಿರ ಪುಟಗಳಿಗಿಂತ ಅಧಿಕ ಕೊಂಕಣಿ ಸಾಹಿತ್ಯ ರಚನೆ. ಇವುಗಳಲ್ಲಿ ಪತ್ತೇದಾರಿ, ವೈಜ್ಞಾನಿಕ, ಐತಿಹಾಸಿಕ ಕಥೆಗಳು ಸೇರಿವೆ. ಧಾರವಾಡ, ಮಂಗಳೂರು ಆಕಾಶವಾಣಿಯಲ್ಲಿ 60ಕ್ಕಿಂತ ಅಧಿಕ ಕಾರ್ಯಕ್ರಮ ನೀಡಿದ್ದಾರೆ. ಕೊಂಕಣಿ ಸಮಾವೇಶದ ಗೋಷ್ಠಿಗಳಲ್ಲೂ ಪ್ರಬಂಧ ಮಂಡಿಸಿದ್ದಾರೆ.