ಜಯನಗರದ ಹುಡುಗಿ ಎಂದೇ ಖ್ಯಾತರಾದ ಮೇಘಾನರವರು ಬಾರ್ಸಿಲೋನಾದಲ್ಲಿ ಏಐ ವಿಷಯದಲ್ಲಿ ಪರಿಣಿತಿ ಪಡೆದು ಈಗ ಬೆಂಗಳೂರಿನ ಒಂದು ಖಾಸಗಿ ಸಂಸ್ಥೆಯಲ್ಲಿ ಏ ಐ(ಕೃತಕ ಬುದ್ಢಿಮತ್ತೆ) ಗುಂಪಿನ ಟೀಮ್ ಲೀಡ್ ಆಗಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ ನಡೆದ ವಿಜಯ ಕರ್ನಾಟಕದ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ವಿಜೇತರು. ಜಯನಗರದ ಹುಡುಗಿ, ಲಿಪಿಯ ಪತ್ರಗಳು #AI ಕಥೆಗಳು,ಬೆಂಗಳೂರು ಕಲರ್ಸ್ , ಪ್ರೀತಿ ಗೀತಿ ಇತ್ಯಾದಿ ಇವರ ಪ್ರಕಟಿತ ಪುಸ್ತಕಗಳು. ಕನ್ನಡಗೊತ್ತಿಲ್ಲ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ 6 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಹೊಸ ಪೀಳಿಗೆಯ ಕಥೆಗಳು ಬರೆಯುವುದು ಇವರ ಅಭ್ಯಾಸ. ಚಾರಣ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಇವರ ಆಸಕ್ತಿ.
ಇದು ಜಯನಗರದ ಹುಡುಗಿಯೆಂದೇ ಫೇಮಸ್ ಆದ ಲೇಖಕಿಯ ಕಥೆ... ʼಝೂಮ್ With ಬುಕ್ ಬ್ರಹ್ಮʼ ವಿಶೇಷ ಕಾರ್ಯಕ್ರಮದಲ್ಲಿ ಲೇಖಕಿ ಮೇಘನಾ ಸುಧೀಂದ್ರ ಅವರೊಂದಿಗೆ ಬದುಕು ಬರಹಗಳ ಕುರಿತಾದ ಮಾತುಕತೆ.