ಹಾಸ್ಯ ಬರಹಗಾರ್ತಿ, ಲೇಖಕಿ ಪಾರ್ವತಮ್ಮ ಮಹಲಿಂಗಶೆಟ್ಟಿ ಅವರು 1928 ಅಕ್ಟೋಬರ್ 24 ರಂದು ಚಿತ್ರದುರ್ಗದಲ್ಲಿ ಜನಿಸಿದರು. ’ನರಿ, ಹಲ್ಲು ಕಂಡೀತು ಜೋಕೆ! ಭಾಗ 1, 2, ಅವರ ಕೃತಿ. ’ಹಿಂದೂ ಮಗುವೆ ನಿನಗಾಗಿ ಒಂದು ಪುಟ್ಟ ಪುಸ್ತಕ ಮತ್ತು ’ಹೆಣ್ಣಿನ ದೃಷ್ಟಿಯಲ್ಲಿ ಈ ಶತಮಾನ” ಎಂಬ ಆತ್ಮಕಥೆಯನ್ನು ಬರೆದಿದ್ಧಾರೆ. ’ಹಳೆಯ ಕಥೆಗಳಿಗೆ ಹೊಸಬಲ, ಅಡಗೂಲಜ್ಜಿಯ ಕಥೆಗಳು, ಮಕ್ಕಳ ಆರೋಗ್ಯ, ಸಂರಕ್ಷಣೆ ಮತ್ತು ನಡವಳಿಕೆ, ಕುಟುಂಬದಲ್ಲಿ ಹೊಂದಾಣಿಕೆ ಮತ್ತು ಮಕ್ಕಳು’ ಅವರ ಸಂಪಾದಿತ ಕೃತಿಗಳು. ಹೆಣ್ಣಿನ ದೃಷ್ಟಿಯಲ್ಲಿ ಈ ಶತಮಾನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ.