ಕತೆಗಾರ್ತಿ ಸ್ನೇಹಲತಾ ದಿವಾಕರ್ ಕಾಸರಗೋಡಿನಲ್ಲಿ (1972ರಲ್ಲಿ) ಜನಿಸಿದರು. 18 ವರ್ಷದವರಿದ್ದಾಗ ಬರೆದ ‘ಕರುಪ್ಪ ಮತ್ತು ಕಡಲಮ್ಮ‘ ಕತೆಯು ತರಂಗದಲ್ಲಿ ಪ್ರಕಟವಾಗಿ ಸಂಚಲನ ಸೃಷ್ಟಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಸಂಪಾದಿಸಿದ ‘ಕಾಸರಗೋಡಿನ ಸಣ್ಣ ಕತೆಗಳು’ ಪ್ರಾತಿನಿಧಿಕ ಸಂಕಲನದಲ್ಲಿ ಈ ಕತೆಯು ಸೇರ್ಪಡೆಯಾಗಿದೆ. ‘ಮಗ್ಗ’ ಕಥಾ ಸಂಕಲನ 2020ರಲ್ಲಿ ಪ್ರಕಟಣೆ ಕಂಡಿದೆ.