ಯಡ್ಡಿ ಮಾಮಾ ಬರಲಿಲ್ಲ

Author : ಎಫ್.ಎಂ.ನಂದಗಾವ್

Pages 196

₹ 190.00




Year of Publication: 2021
Published by: ಪೆನ್ಸಿಲ್ ಬುಕ್ ಹೌಸ್
Address: #285, ಎಫ್-5, 5ನೇ ವೆಸ್ಟ್ ಕ್ರಾಸ್, ಉತ್ತರಾಧಿಮಠ ರೋಡ್ ಮೈಸೂರು

Synopsys

‘ಯಡ್ಡಿ ಮಾಮಾ ಬರಲಿಲ್ಲ’ ಕೃತಿಯು ಎಫ್.ಎಂ. ನಂದಗಾವ ಅವರ ಕಥಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಪ್ರಸ್ತುತ ಸಂಕಲನದಲ್ಲಿ ಒಟ್ಟು ಹತ್ತು ಕತೆಗಳಿದ್ದು ಅವು ಎರಡು ಭಾಗಗಳಲ್ಲಿ ಹರಡಿಕೊಂಡಿವೆ. ಮೊದಲ ಭಾಗದಲ್ಲಿ ಸಮಕಾಲೀನ ಸಾಮಾಜಿಕ ಸಂದರ್ಭಗಳ ಕತೆಗಳಿದ್ದರೆ ಎರಡನೆಯ ಭಾಗದಲ್ಲಿರುವ ಕತೆಗಳಿಗೆ ಐತಿಹಾಸಿಕ ಹಿನ್ನೆಲೆಯಿದೆ. ಆದರೂ ಈ ಕತೆಗಳ ಆಶಯ ಹಾಗೂ ಒಟ್ಟು ಪರಿಣಾಮ ಬಹುಮಟ್ಟಿಗೆ ಏಕರೀತಿಯಲ್ಲಿಯೇ ಇವೆಯೆನ್ನಬೇಕು. ನಂದಗಾಂವ್ ಇಲ್ಲಿ ಅನುಸರಿಸಿರುವುದು ವೃತ್ತಾಂತಕ್ಕೆ ಸಮೀಪವೆನ್ನಿಸುವ ನಿರೂಪಣಾ ವಿಧಾನ. ವೃತ್ತಾಂತವೆನ್ನುವುದು ಸುರುಳಿಸುತ್ತಿದ ರಿಬ್ಬನ್ನನ್ನು ಬಿಚ್ಚುವಷ್ಟು ಸರಾಗವಾಗಿ ನಡೆದದ್ದನ್ನು ನಿರೂಪಿಸುವ, ಕಥಾಸಂವಿಧಾನದ (ಪ್ಲಾಟ್) ಕಟ್ಟುಪಾಡುಗಳನ್ನು ಸುಲಭವಾಗಿ ಮೀರುವ ನಿರೂಪಣಾ ವಿಧಾನ. ಈ ವಿಧಾನದಲ್ಲಿ ಕತೆ ಹೇಳುವವನ ಅನುಭವ ಅವನ ಉತ್ಸಾಹದ ಸಮೇತ ಬಹಿರಂಗಗೊಂಡರೆ, ಕತೆ ಕೇಳುವವನ ಕುತೂಹಲ ಅವನ ಕಲ್ಪನಾ ಶಕ್ತಿಯನ್ನು ಉದ್ದೀಪಿಸಿ ಆ ಅನುಭವಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ನಂದಗಾಂವ್ ಅವರ ಕತೆಗಳ ಸ್ಪಕ್ಟರ್ ಅಥವಾ ಸಂರಚನೆಯ ಬಗ್ಗೆ ಒಂದೆರಡು ಮಾತು ಹೇಳಲೇಬೇಕು. ಉತ್ತಮ ಪುರುಷ ನಿರೂಪಣೆಯಲ್ಲಿರುವ ಈ ಸಂಕಲನದ ಬಹುಪಾಲು ಕತೆಗಳಲ್ಲಿ ಒಬ್ಬ ವ್ಯಕ್ತಿಗೆ ಒಂದು ವಸ್ತುವಿಗೋ ಒಂದು ಧಾರ್ಮಿಕ ಆಚರಣೆಗೋ ಇತಿಹಾಸಕ್ಕೋ ಐತಿಹ್ಯಕ್ಕೂ ಸಂಬಂಧಿಸಿದ ಸಮಸ್ಯೆಯೊಂದಿದ್ದು ಅದು, ಯಾಕೆ ಹೀಗೆ, ಇದರ ರಹಸ್ಯವೇನು, ಈ ರಹಸ್ಯವನ್ನು ಬಗೆಯುವುದು ಹೇಗೆ ಇತ್ಯಾದಿ ವಿಚಾರಗಳನ್ನು ಈ ಕೃತಿ ತಿಳಿಸುತ್ತದೆ.

About the Author

ಎಫ್.ಎಂ.ನಂದಗಾವ್

ಬರಹಗಾರ, ಅನುವಾದಕ ಎಫ್.ಎಂ.ನಂದಗಾವ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಂಗ್ಲಿಷ್ ಇಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಕೃತಿಗಳ ಅನುವಾದ ಮಾಡುವ ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ ಖ್ಯಾತ ಕ್ರಿಸ್ಮನ್ ಕಥೆಗಳು, ಮೂರು ಸತ್ಯಗಳು, ಇಬ್ಬರು ವೃದ್ಧರ ತೀರ್ಥಯಾತ್ರೆ,  ಮೂರು ಕ್ರಿಸ್ಮಸ್ ದೈವಗಳು, ಬದುಕಲು ಏನು ಬೇಕುThe Little Flower of India ಹಾಗೂ Lead Kindly Light ಮುಂತಾದವು  ...

READ MORE

Related Books