ಬೆಳ್ಳಾವೆ ನರಹರ ಶಾಸ್ತ್ರಿಗಳು ಬರೆದ ಕಥೆ-ವಿಜಯ ವಿಲಾಸ. ಪ್ರಸ್ತಾವನೆಯಲ್ಲಿ ಲೇಖಕರೇ ಹೇಳಿರುವಂತೆ ‘ಇದು ಯವನ-ಯಾಮಿನಿ ಜಾತಿಗೆ ಸೇರಿದ ಒಂದು ಕಲ್ಪಿತ ಕಥೆ. ಲೌಕಿಕವಾಗಿ ಧರ್ಮ-ನೀತಿಗಳ ಬೋಧೆಯೂ ಇಲ್ಲಿದೆ. ಇವುಗಳ ಮಹತ್ವ ತಿಳಿಸಲು ಮಾಯಮಂತ್ರ-ತಂತ್ರ ಹಾಗೂ ಅಮಾನುಷ ಹಾಗೂ ಅತಿಮಾನುಷ ಕೃತ್ಯಗಳನ್ನುಸೇರಿಸಲಾಗಿದೆ.
ಅರಸ ಚಂದ್ರಸೇನರಾಯ. ಶೀಲವತಿದೇವಿ, ಸೌದಾಮಿನಿ, ಕಾದಂಬಿನಿ-ಇವರು ಸವತಿಯರು. ಶೀಲವತಿದೇವಿಗೆ ವಿಜಯದಶಮಿಯಂದು ಪುತ್ರ ಜನಿಸಿದ್ದು, ಆತನಿಗೆ ವಿಜಯ ಎಂತಲೂ ನಾಮಕಾರಣವಾಗುತ್ತದೆ. ಈ ಸವತಿಯರ ಮಕ್ಕಳು ಬೆಳೆಬೆಳೆದಂತೆಲ್ಲ ಹೇಗೆ ದಾಯಾದಿಗುಳಾಗುತ್ತಾರೆ ಎಂಬುದೂ ಸಹ ಕಥೆಯ ಪ್ರಮುಖ ಭಾಗ. ಒಂದು ಸನ್ನಿವೇಶದಲ್ಲಿ ಶೀಲವತಿಯ ಶೀಲ ಶಂಕಿಸಿದ ಚಂದ್ರಸೇನರಾಯನು ಆಕೆಯ ರುಂಡ ಚಂಡಾಡಲು ಹೋಗುತ್ತಾನೆ. ಆದರೆ, ಇತರೆ ಸವತಿಯರು ಬಂದು ಕಾಪಾಡುತ್ತಾರೆ. ಈ ಸನ್ನಿವೇಶದ ಇಬ್ಬರು ಅಪರಾಧಿಗಳ ವಿಚಾರಣೆ ನಡೆಯುತ್ತದೆ.ಇಂತಹ ಪ್ರಸಂಗಗಳಿಂದ ಕಥೆಯು ಓದುಗರಲ್ಲಿ ಕುತೂಹಲ ಕೆರಳಿಸುತ್ತದೆ.
ನಾಟಕಗಳು ಇಲ್ಲದೇ ಸೊರಗಿದ್ದ ಕಾಲದಲ್ಲಿ, ವೃತ್ತಿ ರಂಗಭೂಮಿಗೆ ನಾಟಕಗಳನ್ನು ಬರೆದುಕೊಟ್ಟು, ಕನ್ನಡಿಗರಲ್ಲಿ ಹಾಸ್ಯಪ್ರಜ್ಞೆ ಮೂಡಿಸಿದವರು ನರಹರಿಶಾಸ್ತ್ರಿ. 1882 ಸೆಪ್ಟಂಬರ್ 21 ತುಮಕೂರಿನ ಬೆಳ್ಳಾವೆ ಗ್ರಾಮದಲ್ಲಿ ಜನಿಸಿದರು. 1901ರಲ್ಲೇ ’ಸ್ಯಮಂತಕೋಪಾಖ್ಯಾನ’ ನಾಟಕ ರಚನೆ. ಗುಬ್ಬಿ ವೀರಣ್ಣನವರ ಅಪೇಕ್ಷೆಯಂತೆ ರಚಿಸಿದ ನಾಟಕ ಶ್ರೀಕೃಷ್ಣ ಲೀಲಾ. ಗುಬ್ಬಿ ಕಂಪನಿಗೂ, ನಾಟಕಕಾರರಿಗೂ ತಂದುಕೊಟ್ಟ ಹೆಸರು. ನಂತರ ರಚಿಸಿದ್ದು ’ಸದಾರಮೆ, ಗುಲೇಬಕಾವಲಿ, ಕಂಸವಧೆ, ಲಂಕಾದಹನ, ರುಕ್ಮಿಣೀ ಸ್ವಯಂವರ, ಮಹಾತ್ಮ ಕಬೀರದಾಸ, ಜಲಂಧರ’ ಈ ನಾಟಕಗಳು ಗುಬ್ಬಿ ಕಂಪನಿಯಿಂದಲೇ ಪ್ರದರ್ಶನಗೊಂಡವು. ’ಶಂಕರವಿಜಯ, ದಶಾವತಾರ, ಸತೀ ಅನಸೂಯ, ಶಾಕುಂತಲ, ಪಾರಿಜಾತ, ಹೇಮರೆಡ್ಡಿ ಮಲ್ಲಮ್ಮ, ಪ್ರಭಾವತಿ ಮುಂತಾದ ನಾಟಕಗಳನ್ನು ಬರೆದರು. ಇವರ ...
READ MORE