ಲೇಖಕಿ ಸಿಂಧೂ ಪ್ರಶಾಂತ್ ಅವರ ಚೊಚ್ಚಲ ಕೃತಿ ‘ವೀರಗಾಥೆ’ ಯೋಧರ ಅಜ್ಞಾತ ಸಾಹಸ ಕಥನಗಳನ್ನು ಸಂಕಲನಗೊಳಿಸಿದೆ. ಕರ್ನಲ್ ಅಶುತೋಷ್ ಶರ್ಮಾ ಒಬ್ಬ ಶ್ರಮಜೀವಿ. ಎಲ್ಲಿಯವರೆಗೆ ತಾನು ಬಯಸಿದ್ದನ್ನು ಪಡೆಯುವವರೆಗೆ ವಿರಮಿಸುತ್ತಿರಲಿಲ್ಲ. ಆತನ ಕಠಿಣ ಪರಿಶ್ರಮ, ದೃಢ ನಿಶ್ಚಯ ಆತ ಬಯಸಿದ್ದನ್ನು ಸಾಧಿಸುವಲ್ಲಿ ನೆರವಾಯಿತು.ಚಿಕ್ಕವನಿದ್ದಾಗಲೇ ಒಳ್ಳೆಯ ಹೆಸರು ಸಂಪಾದಿಸಬೇಕು, ದೇಶಕ್ಕೆ ಒಳಿತಾಗುವ ಕೆಲಸ ಮಾಡಬೇಕೆಂಬ ಹಂಬಲ ಅವನಿಗಿತ್ತು. ಇಂದು ಇಡೀ ದೇಶ ಆತನ ಹೆಸರನ್ನು ಹೆಮ್ಮೆಯಿಂದ, ಗೌರವದಿಂದ ನುಡಿಯುತ್ತದೆ ಎಂದರೆ ಅದಕ್ಕೆ ಕಾರಣ ಸಾಮಾನ್ಯ ಬಾಲಕನಲ್ಲಿದ್ದ ಅಸಾಮಾನ್ಯ ದೃಢ ಸಂಕಲ್ಪ. ತನ್ನ ಕನಸನ್ನು ಬೆನ್ನು ಹತ್ತಿದ ಅಶುತೋಷ್ ಏಕಾಗ್ರತೆ, ಪರಿಶ್ರಮದ ಕಾರಣದಿಂದ ಉನ್ನತ ಸ್ಥಾನಕ್ಕೆ ಏರಿದ ಮಾತ್ರವಲ್ಲ ಸಮಯ ಬಂದಾಗ ಕರ್ತವ್ಯನಿಷ್ಠೆ ಮರೆಯುತ್ತಾ ದೇಶಕ್ಕಾಗಿ ಪ್ರಾಣವನ್ನೂ ಸಮರ್ಪಿಸಿದ. ಈ ರೀತಿಯ ಕುತೂಹಲಕಾರಿಯಾದ ಕಥನಗಳು ಈ ಕೃತಿಯಲ್ಲಿವೆ.
ಲೇಖಕಿ ಸಿಂಧೂ ಪ್ರಶಾಂತ್ ಮೂಲತಃ ಹಾಸನದವರು. ತಂದೆ ನಾಗರಾಜ್ ಕೆ. ತಾಯಿ ಅಮೃತಾ ನಾಗರಾಜ್. ಪ್ರಸ್ತುತ ಮಂಗಳೂರಿನಲ್ಲಿ ಆಯುರ್ವೇದ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಚೊಚ್ಚಲ ಕೃತಿ ‘ವೀರಗಾಥೆ’. ...
READ MORE