ಗೊರೂರು ರಾಮಸ್ವಾಮಿ ಅಯ್ಯಂಗಾರ ಅವರ ಸಣ್ಣ ಕಥೆಗಳ ಕೃತಿ-ವೈಯ್ಯಾರಿ. ಇಲ್ಲಿ 12 ಕಥೆಗಳನ್ನು ಸಂಕಲಿಸಲಾಗಿದೆ. ಯುದ್ಧದ ಕಾವು ಕಥೆಯು ಚೀನಾ ದೇಶದ ಲೇಖಕ ‘ಚೌ ಎರ್ ಫ್ರು’ ಅವರ ಕಥೆಯ ಅನುವಾದವಾಗಿದೆ. ಜಪಾನಿನೊಂದಿಗೆ ಸುದೀರ್ಘವಾಗಿ ಯುದ್ಧ ನಡೆಸುತ್ತಿದ್ದರೂ ಚೀನಾ ದೇಶವು ತನ್ನತನವನ್ನು ಹೇಗೆ ಉಳಿಸಿಕೊಂಡಿದೆ ಎಂಬುದು ಇಲ್ಲಿಯ ಸಾರ. ಗೋಲ್ಡನ್ ಅವರ್‍ಸ್ ಎಂಬ ಚೀನಿ ಕಥೆಯ ಸಾರಾಂಶ ಆಧರಿಸಿ ‘ಪ್ರಸನ್ನವಾದ ಕಲಹ’ ಎಂಬ ಕಥೆ ಬರೆದಿದ್ದು, ಇಲ್ಲಿಯ ಐದು ಕಥೆಗಳು ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟವಾಗಿವೆ ಎಂದು ಲೇಖಕರು ಹೇಳಿದ್ದಾರೆ. ಬೂತಯ್ಯನ ಮಗ ಅಯ್ಯು, ದೊಳ್ಳನ ಹರಕೆ, ಗಂಡುಬೀರಿ ಹೊಸಬಿ, ಲಕ್ಕಿಯ ಗಂಡಂದಿರು, ಹಾವಿನ ಅಯ್ಯ, ವೈಯ್ಯಾರಿ ಹೀಗೆ ಕಥೆಗಳು ಒಳಗೊಂಡಿವೆ.
ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...
READ MORE