ಅಂಚಿಗೆ ತಳ್ಳಲ್ಪಟ್ಟ ಹಿಂದುಳಿದ ಪ್ರದೇಶ ಮತ್ತು ವರ್ಗಕ್ಕೆ ಸೇರಿದ ಕಲ್ಲೇಶ್ ಕುಂಬಾರ್ ಅವರ ಕಥೆಗಳೇ ಸ್ವಯಂ ತಾವೇ ದನಿ ತೆಗೆದು ಹೇಳುವಂತಿವೆ. ಬಿಡುಗಡೆಯೇ ಇಲ್ಲದ ಯಾತನೆಗಳಲ್ಲಿ ಇಲ್ಲಿಯ ಪ್ರತಿ ಪಾತ್ರಗಳು ನಿಟ್ಟುಸಿರು ಬಿಡುತ್ತವೆ. ಕಥೆಯ ಭಾಷೆ, ನಿರೂಪಣೆ, ಶೈಲಿ ಎಲ್ಲವೂ ಕಥೆಗಳ ಗಟ್ಟಿತನಕ್ಕೆ ಪ್ರಮುಖ ಅಂಶಗಳಾಗಿವೆ. ಸಂಕಲನದಲ್ಲಿ ಒಟ್ಟು 9 ಕಥೆಗಳಿವೆ.
ಕೃತಿಗೆ ಮುನ್ನುಡಿ ಬರೆದ ಸಾಹಿತಿ ಪ್ರಹ್ಲಾದ ಅಗಸನಕಟ್ಟೆ ‘ ಇಲ್ಲಿಯ ಕಥೆಗಳ ವಿಶೇಷವೆಂದರೆ ಅವುಗಳ ಮಹತ್ವಾಕಾಂಕ್ಷೆ ಗುಣ ಮತ್ತು ವಿಭಿನ್ನ ಪ್ರಯೋಗಕ್ಕೆ ತೆರೆದುಕೊಳ್ಳಬೇಕೆಂಬ ತಹತಹ. ಜನಪ್ರಿಯ ಮಾದರಿಯನ್ನು ಅವು ಸ್ಪಷ್ಟವಾಗಿ ನಿರಾಕರಿಸುತ್ತವೆ. ರೋಚಕತೆಯನ್ನು, ಅತಿಶಯೋಕ್ತಿಯನ್ನು ವರ್ಣನೆಗಳಲ್ಲಿ ಮೈಮರೆಯುವ ಮೋಹವನ್ನು ಅವು ಕೈ ಬಿಡುತ್ತವೆ ಎಂದು ಪ್ರಶಂಸಿಸಿದ್ದಾರೆ.
-
ಬೆಳಗಾವಿ ಜಿಲ್ಲೆಯ ಹಾರೂಗೇರಿ ಗ್ರಾಮ (ಜನನ: 06-05-1967) ಹುಟ್ಟೂರು. ಧಾರವಾಡ, ದಾವಣಗೆರೆ ಮತ್ತು ಬೀದರ್ ನಲ್ಲಿ ವಿದ್ಯಾಭ್ಯಾಸ. ಹಾರೂಗೇರಿಯ ಶ್ರೀ ಕರೇಸಿದ್ಧೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. 'ಉಸುರಿನ ಪರಿಮಳವಿರಲು' ಕಥಾಸಂಕಲನ ಮತ್ತು 'ಪುರುಷ ದಾರಿಯ ಮೇಲೆ' ಕವನಸಂಕಲನಗಳ ಪ್ರಕಟಣೆ. ಜೊತೆಗೆ,ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಥೆ, ಕವನ,ಲೇಖನಗಳ ಪ್ರಕಟಣೆಯಾಗಿವೆ. 'ಪಾಪು ಕಥಾ ಪ್ರಶಸ್ತಿ', 'ಜಯತೀರ್ಥ ರಾಜಪುರೋಹಿತ ಕಥಾ ಪ್ರಶಸ್ತಿ', 'ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ, 'ವಿಜಯವಾಣಿ ದೀಪಾವಳಿ ಕಥಾಸ್ಪರ್ಧೆ', 'ಕರವೇ ಮಾಸಿಕದ ಕಥಾಸ್ಪರ್ಧೆ', 'ಗುರುತು ಮಾಸಿಕ ಕಥಾಸ್ಪರ್ಧೆ', 'ಪ್ರಜಾವಾಣಿ ದೀಪಾವಳಿ ಕಾವ್ಯಸ್ಪರ್ಧೆ', 'ತಿಂಗಳು ಮಾಸಿಕ ಪತ್ರಿಕೆಯ ಕಾವ್ಯಸ್ಪರ್ಧೆ', 'ಮೊಗವೀರ ಮಾಸಿಕದ ...
READ MORE