`ಉಪರಿ’ ಅಜಿತ್ ಹರೀಶಿ ಅವರ ಕಥಾಸಂಕಲನವಾಗಿದೆ. ಕೃತಿ ಕುರಿತು ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ಹೀಗೆ ಹೇಳಿದ್ದಾರೆ; ಅಜಿತ್ ಅವರ ಉಪರಿ ಸಂಕಲನವನ್ನು ಓದುವಾಗ ಸಣ್ಣಕಥೆಗಳೆಂದರೆ ಇಂಥದ್ದೇ ಆಶಯ ಮತ್ತು ಆಕೃತಿಯನ್ನು ಹೊಂದಿರಬೇಕು ಅನಿಸಿಬಿಟ್ಟಿತು. ಇಲ್ಲಿ ಬಳಸಿರುವ ಶೈಲಿ ನಮ್ಮ ಸಮಕಾಲೀನರಿಗಿಂತ ವಿಭಿನ್ನ ಮತ್ತು ವಿಶಿಷ್ಟ ಅನಿಸುವುದು ಈ ಕಥೆಗಳ ಗತಿ ಮತ್ತು ಗಾತ್ರದಿಂದ, ತಮ್ಮ ಕಥೆಗಳ ವೈಚಾರಿಕತೆ, ಅರಿವು, ಆಳ, ವಿಸ್ತಾರ, ವ್ಯಾಪ್ತಿಗಳನ್ನು ಎಲ್ಲಿಯೂ ವಾಚ್ಯವಾಗಿಸದೆ ಓದುಗನ ಗ್ರಹಿಕೆಗೆ ಬಿಟ್ಟಿರುವುದು ಲೇಖಕನ ಜಾಣ್ಮೆಯಾಗಿದೆ. ಅನಗತ್ಯ ವಿವರಗಳನ್ನು ತುಂಬಿ ಓದುಗರ ಗಮನವನ್ನು ಅತ್ತಿತ್ತ ಹೋಗುವಂತೆ ಮಾಡದೆ, ಚಿಕ್ಕದಾಗಿ ಚೊಕ್ಕದಾಗಿ ಹೇಳಬೇಕಂದುಕೊಂಡಷ್ಟನ್ನೇ ಹೇಳುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಹಗ್ಗದ ಮೇಲೆ ನಡೆಯುವಂತಹ ಏಕಾಗ್ರತೆಯಿಂದ ಗಮ್ಯದತ್ತ ಸಾಗುವ ಇಲ್ಲಿನ ಕಥೆಗಳಲ್ಲಿ ನಗರ ಜೀವನದ ಸಂಕೀರ್ಣತೆಯೂ ಇದೆ: ಹಳ್ಳಿಗಳ ಮುಗ್ಧ ಬದುಕಿನ ಸರಳತೆಯೂ ಇದೆ. ಅಜಿತ್ ಆರಿಸಿಕೊಂಡಿರುವ ಕಥಾವಸ್ತುಗಳು ಯಾವುದೇ ಒಂದು ಪ್ರದೇಶಕ್ಕೆ, ವರ್ಗಕ್ಕೆ ಅಥವಾ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲರನ್ನೂ ಒಳಗಿಳಿಸಿಕೊಂಡು ಪಾತ್ರಗಳೊಂದಿಗೆ ಬೆಸೆಯುತ್ತವೆ.
ಲೇಖಕ ಡಾ. ಅಜಿತ್ ಹರೀಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ, ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿರುತ್ತಾರೆ. ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವೀಧರರಾದ ಇವರು, ಆಕ್ಯುಪಂಕ್ಚರ್ ಚಿಕಿತ್ಸೆ , ಹಿಪ್ನೋಥೆರಪಿಯಲ್ಲಿಯೂ ಪರಿಣಿತರು. ಪ್ರಸ್ತುತ ಹರೀಶಿಯಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು. ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು. ಕಥಾಭರಣ ಸಂಪಾದಿತ ಕೃತಿಯಾಗಿದೆ. ಆರೋಗ್ಯದ ಅರಿವು ...
READ MORE