ಪತ್ರಕರ್ತ, ಲೇಖಕ ಜೋಗಿಯವರ ’ಉಳಿದ ವಿವರಗಳು ಲಭ್ಯವಿಲ್ಲ’ ಕಥಾ ಸಂಕಲನವಾಗಿದೆ.
ಭಾರತೀಯ ನೋಟದ ಕಥನ ಶೈಲಿಯಂತಿರುವ ಈ ಕಥಾ ಸಂಕಲನದೊಳಗೆ ನಗರ ಕಥನಗಳು ಸೇರಿವೆ. ಜೋಗಿ ಅವರ ಬೆಂಗಳೂರು ಸರಣಿಯ ಮುಂದುವರಿಕೆಯಾದ ಕೃತಿ ’ಉಳಿದ ವಿವರಗಳು ಲಭ್ಯವಿಲ್ಲ’. ಈ ಕೃತಿಯು ಬದಲಾಗುತ್ತಿರುವ ಜಗತ್ತಿನೊಂದಿಗೆ ಬಾಳನ್ನು ಹಂಚಿಕೊಂಡು ಅದಕ್ಕೆ ಸಾಕ್ಷಿಯಾಗುವ ಪುಸ್ತಕವಿದು. ಇಲ್ಲಿನ ಮನುಷ್ಯರ ಜೊತೆಗಿನ ಮಾತುಕತೆ ಒಂದು ರೀತಿಯಲ್ಲಿ ನಗರ ಜೀವನದ ಜೊತೆಗಿನ ವ್ಯವಹಾರದ ಹಾಗೆ ಸಾಗುವಂತದ್ದು. ವ್ಯವಸ್ಥೆಯೇ ಮನುಷ್ಯನ ಮನಸ್ಸಿನ ತರಹ ಕೆಲಸ ಮಾಡುವ ಅಥವಾ ಮನುಷ್ಯನೇ ವ್ಯವಸ್ಥೆಗೆ ಹೊಂದಿಕೊಂಡು ಅದಕ್ಕೂ ತನಗೂ ವ್ಯತ್ಯಾಸವಿಲ್ಲದ ಹಾಗೆ ಬದುಕುವ ಅನೇಕ ಪಾತ್ರಗಳನ್ನು ಈ ಕೃತಿ ಓದುಗರಿಗೆ ಪರಿಚಯಿಸುತ್ತದೆ.
ಜೋಗಿ, ಜಾನಕಿ, ಎಚ್. ಗಿರೀಶ್ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್ ರಾವ್ ಹತ್ವಾರ್ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್ 16ರಂದು. ಮೂಲತಃ ಸೂರತ್ಕಲ್ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಯ್ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...
READ MORE