ಲೇಖಕಿ ಶುಭಾ ಎ.ಆರ್ ಅವರ ಕತಾಸಂಕಲನ ತುಂಡು ಭೂಮಿ - ತುಣುಕು ಆಕಾಶ. ಈ ಸಂಕಲನದಲ್ಲಿ ಲೇಖನ ರಾಗವೇಂದ್ರ ಪಾಟೀಲ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಇಲ್ಲಿನ ಎಲ್ಲ ಕತೆಗಳಲ್ಲೂ ಕೂಡ ನೇರ ಹಾಗೂ ಪಾರದರ್ಶಕದಂತಹ ಸಂವಾದಗಳು ನಮ್ಮನ್ನು ಕುಡಿಸಿಕೊಂಡು ಅನುಭವವೊ ದನ್ನು ಅನಾವರಣಗೊಳಿಸಿ ‘ಇದಮಿತ್ಥಂ’ ಎನ್ನುತ್ತವೆ. ಅನಾಯಾಸ ನಿರೂಪಣೆಯೊಳಗೆ ಗಾಢ ಜೀವನ ಸತ್ಯವೊಂದು ಹರಿದಾಡುತ್ತವೆ ಎಂಬುದಾಗಿ ಹೇಳಿದ್ದಾರೆ.
ಲೇಖಕಿ ಶುಭಾ ಎ. ಆರ್. ಅವರು ಮೂಲತಃ ಬೆಂಗಳೂರಿನವರು. ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ವಿಜ್ಞಾನ ಶಿಕ್ಷಕಿ. ವಿಜ್ಞಾನ ಪಠ್ಯಪುಸ್ತಕವೂ ಸೇರಿದಂತೆ ಶಿಕ್ಷಣ ಇಲಾಖೆಯಲ್ಲಿ ಹಲವಾರು ಪುಸ್ತಕಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗಾಗಿ ‘ಧರೆಯನುಳಿಸುವ ಬನ್ನಿರಿ’ ಎಂಬ ವೈಜ್ಞಾನಿಕ ನಾಟಕ, ‘ತುಂಡು ಭೂಮಿ- ತುಣುಕು ಆಕಾಶ’,(ಕಥಾ ಸಂಕಲನ), ‘ತುಟಿ ಬೇಲಿ ದಾಟಿದ ನಗು’ (ಕವನ ಸಂಕಲನ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE