ಕನ್ನಡಕ್ಕೆ ಸಾಹಿತ್ಯಕ್ಕೆ ಹೊಸದಾದ ಆಯಾಮಗಳನ್ನು ನೀಡುವ 12 ಕಥೆಗಳಿರುವ ಕಥಾ ಸಂಕಲನ “ತಪ್ತ”. ವ್ಯಕ್ತಿಯೊಬ್ಬನ ಸಂಕೀರ್ಣತೆಯನ್ನು ಚೌಕಟ್ಟಿನ ಹೊರಗೂ ವಿಸ್ತರಿಸುವುದನ್ನು ಕತೆಯ ಮೂಲಕ ಹೇಳಬಹುದಾದ ಸಾಧ್ಯತೆಗೆ ಕನ್ನಡಿ ಹಿಡಿಯುತ್ತದೆ. 2005ರ ' ತಪ್ತ ' ಕತೆಯಲ್ಲಿ ಅಪ್ಪನ ಸಾವಿನ ನಂತರ ಅಮ್ಮನಿಗೆ ನೌಕರಿ ಸಿಕ್ಕಿ, ಅವಳ ತದ್ರೂಪ ಮಡದಿಯ ಅನೈತಿಕ ಸಂಬಂಧವು ಸಂದಿಗ್ಧಕ್ಕೀಡು ಮಾಡುವಂಥದ್ದು. ಭಾವಾಂದೋಲನದ ಪ್ರತೀಕವೇ 'ತಪ್ತ'ವಾಗಿದೆ.ಅಪೇಕ್ಷಿತ ಗಂಡು ಮಗು ಆಗದಿದ್ದಾಗ ಗಂಡಸುತನಕ್ಕೆ ಸವಾಲಾಗಿ ಕ್ರೂರಿಯಾಗುವ ಸನ್ನಿವೇಶ, ಭಾವದಾಚೆಯೂ ವ್ಯಕ್ತಿ ಅರ್ಥವಾಗದೆ ಉಳಿದುಬಿಡುವುದನ್ನು ಕಥೆಗಾರ ಇಲ್ಲಿ ಅವಲೋಕಿಸಿ ಬರೆದಿದ್ದಾರೆ.
ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ್ತು ’ಸ್ನಾನ’ ಎಂಬ ಮೂರು ಕಿರು ಕಾದಂಬರಿಗಳ ಸಂಕಲನವನ್ನೂ ಪ್ರಕಟಿಸಿದ್ದರು. 'ಅಜಂತಾ’ ಎಂಬ ಮಾಸಪತ್ರಿಕೆಯನ್ನು ಒಂದು ...
READ MORE