‘ತೆರೆಯ ಮರೆಯಲ್ಲಿ- ಭಾಗ-3’ ಜ್ಞಾನಪೀಠ ಪ್ರಶಸ್ತಿ ಪುರಸ್ತೃತ ಶಿವರಾಮ ಕಾರಂತರ ಸಣ್ಣಕತೆಗಳ ಸಂಕಲನ. ಕೃತಿಯ ಕುರಿತು ಬರೆಯುತ್ತಾ ‘ನಾಲಗೆಯಿಂದ ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ ಎಂದು ಸಾರಿದ ದೇಶದಲ್ಲಿ, ನಾರಿಯು ಪುರುಷನ ಅರ್ಧಾಂಗಿಯೆಂದು ಸಾರುವ ನಾಡಿನಲ್ಲಿ, ನಾರಿಯ ನಿಜವಾದ ಚಿತ್ರ ಹೇಗಿದೆಯೆಂದು ಕಾವ್ಯ, ಬಾಯಬಿನ್ನಾಣಗಳ ತೆರೆಯನ್ನು ಹರಿದು, ಅದರ ಮರೆಯೊಳಗಿನ ನಿಜವನ್ನು ತೋರಿಸಲು ಇಲ್ಲಿ ಯತ್ನಿಸಿದೆ’ ಎನ್ನುತ್ತಾರೆ ಶಿವರಾಮ ಕಾರಂತರು. ಜೊತೆಗೆ ಈ ಕಥೆಗಳಲ್ಲಿ ಕಾಣುವಂತೆ ನೋವಿನಿಂದ ನರಳುವ ಬಿಂಬಗಳನ್ನು ಸಾಮಾನ್ಯ ಪ್ರತಿ ಮನೆಯಲ್ಲಿ ಕಾಣುವಿರಂತೆ. ಅವರ ನೋವಿನ ನರಳುವಿಕೆಯನ್ನೇ, ಸಿಡಿದಾಟವನ್ನೇ, ನರ್ತನದ ನಲಿವು ಎಂದು ಸಾರುವ ನಮ್ಮ ಪಂಡಿತರಿಗೂ, ಪಾತಿವ್ರತ್ಯದ ಹೆಸರಿನಲ್ಲಿ ಬೆನ್ನು ಚಪ್ಪರಿಸುವ ಉದಾರಿಗಳಿಗೂ ಕೊರತೆ ಬರಲಾರದು ಎನ್ನುತ್ತಾರೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE