ನಾಗರೀಕ ಸಮಾಜದಲ್ಲಿನ ವರ್ತನೆಗಳಿಗೆ, ಪ್ರತಿಯಾಗಿ ನುಡಿಯುವ, ಭಾವಾತಿರೇಕಗಳಿಗೆ ತೀವ್ರವಾಗಿ ಮಣಿಯದೇ ಅದನ್ನು ಸಹಜವಾಗಿ , ಮುಕ್ತವಾಗಿ ತೆರೆದುಕೊಳ್ಳುವ ಇವರ ಕತೆಗಳು ಬದುಕಿನ ಸಂಕೀರ್ಣತೆಗೆ ತುಡಿಯುವ ಮನಸ್ಸುಗಳೊಂದಿಗೆ ವಿಹರಿಸುತ್ತದೆ. ತೀರಾ ಸಹಜವಾದ ಕೌಟುಂಬಿಕ ಬದುಕಿನೊಳಗೆ, ಪ್ರವೇಶಿಸುವ ಇವರ ಕಥೆಗಳಿಗೆ ಭಾವನಾತ್ಮಕ ನೆಲೆಯಲ್ಲಿಯೇ ಸಿಲುಕಿಕೊಂಡು ತೊಳಲಾಡುವ ಅನಿವಾರ್ಯತೆ ಕಂಡು ಬರುವುದಿಲ್ಲ. ಇಲ್ಲಿರುವ ಕಥೆಗಳು ಪ್ರತಿವಾಸ್ತವದಂತೆ , ನಮ್ಮ ವರ್ತಮಾನದ ದಿಕ್ಕುದೆಸೆಗಳತ್ತ ಮುಖಮಾಡುತ್ತವೆ. ಕಥಾವಸ್ತುವನ್ನು ಅತ್ಯಂತ ಸಹಾನುಭೂತಿಯಿಂದ ಕಾಣುವ ಸಜ್ಜನಿಕೆಯ ಮನೋಭಾವವನ್ನೂ, ಕಥಾಲೋಕದ ಹೊಸ ಆಯಾಮವನ್ನು ಇಲ್ಲಿರುವ ಕಥೆಗಳು ಪರಿಚಯಿಸುತ್ತದೆ. ಪ್ರತಿಯೊಂದು ಕಥೆಗಳಲ್ಲೂ ಸಹಜವಾಗಿರುವ ವ್ಯಕ್ತಿಗತ ಸಂಭಾಷಣೆ ಇಂದಿನ ದಿನದ ತ್ರಿಭಾಷಾ ಬಳಕೆಯ ತಿರುವನ್ನೂ ಪಡೆದುಕೊಂಡಿದೆ.
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ (1962) ಎಂ.ಎಸ್. ಶ್ರೀರಾಮ್ ಅವರು ಶಿಕ್ಷಣ ಪಡೆದದ್ದು ಉಡುಪಿ, ಬೆಂಗಳೂರು, ಮೈಸೂರು ಮತ್ತು ಆನಂದ್ ದಲ್ಲಿ. ಹೈದರಾಬಾದ್ ನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದ ಅವರು ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಂದ ಡಾಕ್ಟರೇಟ್ ಪಡೆದರು. ಆಮೇಲೆ ಆನಂದದ ಇನ್ಸ್ ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟ್ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದ್ ನ ಬೇಸಿಕ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರೊಫೆಸರ್ ...
READ MORE