‘ತಥಾಸ್ತು’ ಬಿ. ರಮೇಶ್ ಅವರ ಕಥಾಸಂಕಲನವಾಗಿದೆ. ಸುಂದರ ಸನಿವೇಶಗಳನು ಹೃದ್ಯವಾಗಿಯೂ, ಕೆಲವು ದಾರುಣ ಪ್ರಸಂಗಗಳನ್ನು ಮನ ಕರಗುವಂತೆಯೂ ಹೇಳುತಾ ಓದುಗರನ್ನು ಬಹುಜಾಣೆಯಿಂದ ಓದಿನತ್ತ ಸೆಳೆಯುವ ಕೃತಿಯಾಗಿದೆ.
ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾದ ಬಿ. ರಮೇಶ್ ಅವರು ಮೂಲತಃ ಬೆಂಗಳೂರಿನವರು. 1956ರ ಮಾರ್ಚ್ 15ರಂದು ಜನನ. ಸೊಬಗು-ಕವನ ಸಂಕಲನ, ಬಣ್ಣದ ಗಿಣಿ ಹಾಗೂ ಪ್ರಹಾರ-ಗೊರೂರು ಸಾಹಿತ್ಯ ಪ್ರಶಸ್ತಿ ಪಡೆದ ಎರಡು ಪ್ರತ್ಯೇಕ ಕಥಾ ಸಂಕಲನಗಳು. ರನ್ನ ಸಾಹಿತ್ಯ ಪ್ರಶಸ್ತಿ ಪಡೆದ ಕೃತಿ ತಥಾಸ್ತು, ಅಮೃತಧಾರಾ, ಅಮೃತ ಸಿಂಚನ ಹಾಗೂ ಕುಸುಮಾ-ಈ ಮೂರು ಪ್ರತ್ಯೇಕ ಸಂಪಾದಿತ ಕೃತಿಗಳು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.. ...
READ MOREಹೊಸ ಪುಸ್ತಕ- 2003- ಫೆಬ್ರವರಿ
ಲೇಖಕರು ತಮ್ಮ ಏಳನೆಯ ಈ ಕೃತಿಗಾಗಿ ಏಳು ಕಥೆಗಳನ್ನು ನವಿರಾಗಿ ಹೆಣೆದಿದ್ದಾರೆ. ಇಲ್ಲಿನ ಪಾತ್ರ ಸೃಷ್ಟಿಯಲ್ಲಿ ಅತ್ಯಾಧುನಿಕ ಜೀವನಶೈಲಿಯಲ್ಲಿ ಬದುಕುವ ಮನಸ್ಸುಗಳ ಪ್ರತಿಬಿಂಬವೇ ಇಣುಕಿದಂತೆ ಭಾಸವಾ ಗುತ್ತದೆ. ಅಲ್ಲಲ್ಲಿ ನಡೆದ-ನೋಡಿದ ಘಟನೆಗಳನ್ನು ಹೇಳುತ್ತಿರುವರೇನೋ ಎನ್ನುವಂತೆ ಮುಗ್ಧತೆ- ನೈಜತೆ- ಪ್ರಾಮಾಣಿಕತೆ ಬೆರೆತುಹೋಗಿದೆ. ಸುಂದರ ಸನ್ನಿವೇಶಗಳನ್ನು ಹೃದ್ಯವಾಗಿಯೂ, ಕೆಲವು ದಾರುಣ ಪ್ರಸಂಗಗಳನ್ನು ಮನ ಕರಗುವಂತೆಯೂ ಹೇಳುತ್ತ ಓದುಗರನ್ನು ಬಹುಜಾಣೆಯಿಂದ ಓದಿನತ್ತ ಸೆಳೆಯಲಾಗಿದೆ.