‘ತಲ್ಲಣಿಸದಿರು ಕಂಡ್ಯ ತಾಳು ಮನವೆ’ ನಾ. ಸೋಮೇಶ್ವರ ಅವರ ಕಥಾ ಸಂಕಲನ. ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ನಾ. ಸೋಮೇಶ್ವರ, ಹೇಳುತ್ತಿದ್ದ ಕಥನ ಮಾಲಿಕೆಯ ಪುಸ್ತಕ ರೂಪವಿದು. ಈ ಕೃತಿಗೆ ಪತ್ರಕರ್ತೆ ಶ್ರೀದೇವಿ ಕಳಸದ ಬೆನ್ನುಡಿ ಬರೆದಿದ್ದಾರೆ.
‘ಥಟ್ ಅಂತ ಹೇಳಿ’ ಮೂಲಕ ನಾಡಿನ ಎಲ್ಲ ವಯೋಮಾನ ಮತ್ತು ವರ್ಗದವರ ಗಮನ ಸೆಳೆದಿದ್ದರ ಹಿಂದೆ ಅವರ ಅಗಾಧ ಪುಸ್ತಕ ಪ್ರೇಮವಿದೆ, ಜ್ಞಾನದ ಹಸಿವಿದೆ, ಎಲ್ಲಕ್ಕಿಂತ ಮುಖ್ಯವಾಗಿ ಬದುಕಿನ ಬಗ್ಗೆ ವಿನಮ್ರ ಭಾವವಿದೆ. ಪ್ರಸ್ತುತ ಕೃತಿಯಲ್ಲಿ ಅವರು ಪುರಾಣಗಳ, ಧರ್ಮಗ್ರಂಥಗಳ, ಝೆನ್ ಗುರುಗಳ, ಪ್ರವಾದಿಗಳ, ಸೂಫಿಸಂತರ ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಜಗತ್ತಿನೊಳಗೆ ಸಂಚರಿಸಿ ಅವರ ಬದುಕಿನ ಪ್ರಸಂಗಗಳನ್ನು ಕಥೆಗಳನ್ನು ಹೆಕ್ಕಿ ತಂದು ‘ತಲ್ಲಣಿಸದಿರು ಕಂಡ್ಯ ತಾಳು ಮನವೇ’ ಎಂದು ಸಮಾಧಾನ ಹೇಳಿದ್ದಾರೆ. ಈ ಮೂಲಕ ಸಕಾರಾತ್ಮಕ ಹಾದಿಯೆಡೆ ಕೈತೋರಿದ್ದಾರೆ.
ನಾ. ಸೋಮೇಶ್ವರ ಮೇ 14 1955 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಪ್ಪ ಹಾಗೂ ತಾಯಿ ಅಂಜನಾ. ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ತಮ್ಮ ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ಡಾ. ಸೋಮೆಶ್ವರ ಚಂದನ ಟೆಲಿವಿಷನ್ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ವೃತ್ತಿಯಿಂದ ವೈದ್ಯರಾಗಿ ಪ್ರವೃತ್ತಿಯಿಂದ ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅನಂತದೆಡೆಗೆ, ಓ ನನ್ನ ಚೇತನ, ದೈಹಿಕ ಸ್ವಚ್ಛತೆ, ತಲ್ಲಣಿಸದಿರು ಕಂಡ್ಯ ತಾಳು ಮನವೆ, ಅದೃಶ್ಯ ಲೋಕದ ಅಗೋಚರ ಜೀವಿಗಳು, ನಮ್ಮ ದಿನನಿತ್ಯದ ಆಹಾರ, ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 2003 ರಲ್ಲಿ ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...
READ MORE