‘ತಲ್ಲಣಿಸದಿರು ಮನವೇ’ ಕೃತಿಯು ಸಿರಿಮೂರ್ತಿ ಕಾಸರವಳ್ಳಿ ಅವರ ಕತಾ ಸಂಕಲನವಾಗಿದೆ. ಇಲ್ಲಿನ ಕಥಾಪಾತ್ರಗಳಲ್ಲಿ ಕಂಡು ಬರುವ ಮಾನವೀಯತೆ, ಜೀವಪರವಾದ ನಿಲುವು, ಸಿಡಿದೇಳುವಂತಹ ಸಂದರ್ಭಗಳಲ್ಲೂ ಪಾತ್ರಗಳು ವಾಸ್ತವವನ್ನು ಒಪ್ಪಿಕೊಂಡು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಂಡು, ಬದುಕನ್ನು ಸಹ್ಯವಾಗಿಸಿಕೊಳ್ಳುವ ಪರಿ ಇವರ ಕತೆಗಳಲ್ಲಿ ಸ್ವಾಭಾವಿಕವಾಗಿ ಮೂಡಿ ಬಂದಿದೆ. ಅಂತರ್ಜಾತೀಯ ಪ್ರೇಮ ಪ್ರಕರಣಗಳು ಎಷ್ಟೋ ಸಂದರ್ಭಗಳಲ್ಲಿ ನಾನಾ ಅನಾಹುತಕ್ಕೆ ಕಾರಣವಾಗಿ, ಪ್ರೀತಿಯೊಂದಿಗೆ ತಳುಕಿ ಹಾಕಿಕೊಂಡ ಕಾರಣಗಳು, ಮನೆಯವರ ಬಹಿಷ್ಕಾರ, ಕೊಲೆ , ಆತ್ಮಹತ್ಯೆಗಳಲ್ಲಿ ಪರ್ಯಾವಸನವಾಗುವಂತ ಪರಿಸ್ಥಿತಿ ಇವತ್ತಿಗೂ ಅಲ್ಲಲ್ಲಿ ಕಂಡು ಬರುವ ಕಾಲಮಾನದಲ್ಲಿ , ಸಂಕಲನದ ಶೀರ್ಷಿಕೆಯು ಯಾವ ಉದ್ವೇಗಕ್ಕೂ ಎಡೆಗೊಡದೆ ತಣ್ಣಗೆ ಹೇಳಿ ಮುಗಿಸಿದ್ದಾರೆ ಲೇಖಕಿ ಸಿರಿಮೂರ್ತಿ ಕಾಸರವಳ್ಳಿ.
ಲೇಖಕಿ ಸಿರಿಮೂರ್ತಿ ಕಾಸರವಳ್ಳಿ ಅವರು ಮೂಲತಃ ಹೊಸನಗರದ ಹುಲಿಕಲ್ ನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರ ಅನೇಕ ಕತೆಗಳು ನಾಡಿವ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಚಿತ್ರಕಲೆ ಹಾಗೂ ಬರಹ ಅವರ ಆಸಕ್ತಿದಾಯಕ ಕ್ಷೇತ್ರ. ಮೈಸೂರು ಚಿತ್ರಕಲೆ, ತಂಜಾವೂರ್ ಚಿತ್ರಕಲೆ, ಬೌಟಿಕ್ ಚಿತ್ರಕಲೆ, ಕಲಾಕೃತಿ, ದೂರದರ್ಶನದಲ್ಲಿ ಕಸೂತಿ ಕಲೆ ಪ್ರದರ್ಶನ, ಮತ್ತು ಪರಿಕಲ್ಪನೆಯ ಹಲವು ನಾಟಕಗಳ ಪ್ರದರ್ಶನಗಳನ್ನು ನೀಡಿರುತ್ತಾರೆ. ಚಂದನ ವಾಹಿನಿಯಲ್ಲಿ ಸಾಹಿತ್ಯ ಕುರಿತು ಸಂದರ್ಶನ ನೀಡಿದ್ದು, ಆಕಾಶವಾಣಿ ವನಿತಾ ವಿಭಾಗದಲ್ಲಿ ಕತೆ ಪ್ರಸ್ತುತಿಯನ್ನು ಮಾಡಿರುತ್ತಾರೆ. ಕೃತಿಗಳು : ಭಕ್ತಿ ಭಾವ ಸಿರಿ (ಭಕ್ತಿ ಗೀತೆಗಳ ಸಂಕಲನ), ನಡೆದು ಬಂದ ...
READ MORE