ಲೇಖಕ, ಕಥೆಗಾರರಾದ ರಾಘವೇಂದ್ರ ಬಿ. ರಾವ್ (ಅನುಬೆಳ್ಳೆ) ಅವರ ಸಣ್ಣ ಕತೆಗಳ ಸಂಗ್ರಹ ರೂಪ ’ಸುಡುಗಾಡ ಕಾಯ’. ಲೇಖಕರು ಬರೆದ ಒಟ್ಟು 12 ಕತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡವು. ಅವುಗಳೆಲ್ಲಾ ’ಸುಡುಗಾಡ ಕಾಯ’ ಹೆಸರಿನಲ್ಲಿ ಪುಸ್ತಕ ರೂಪ ಪಡೆದುಕೊಂಡಿದೆ.
ಇಲ್ಲಿನ ಬಹುತೇಕ ಕತೆಗಳಲ್ಲಿನ ಪಾತ್ರಗಳು, ಸನ್ನಿವೇಶಗಳು, ಘಟನೆಗಳು, ಪುನರಾವರ್ತನೆಯ ರೂಪವನ್ನು ಪಡೆದುಕೊಂಡಿದೆ. ವಾಸ್ತವ ಪ್ರಜ್ಞೆ, ಕುಟುಂಬ ಪ್ರಜ್ಞೆ, ಮೌಲ್ಯಗಳ ನೆಲೆಗಳಿಂದ ಅರ್ಥೈಸುವ ಕಥಾ ಹಂದರಗಳಿವೆ. ಕೌಟುಂಬಿಕ ವಿಘಟನೆಗಳನ್ನು ಬಿಂಬಿಸುತ್ತಾ , ಕೌಟುಂಬಿಕ ಮೌಲ್ಯಗಳನ್ನು ಹೇಳುವ ಆಶಯ ಇಲ್ಲಿ ವ್ಯಕ್ತವಾಗುತ್ತದೆ.
ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಅನು ಬೆಳ್ಳೆ ಅವರು ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆಯವರಾಗಿದ್ದು ಹುಟ್ಟಿದ್ದು ತಮಿಳುನಾಡಿನ ಮಧುರೈನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಪಡುಬೆಳ್ಳೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಇನ್ನಂಜೆಯ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜ್ ನಲ್ಲಿ ಮುಗಿಸಿದ್ದರು. ಶಿರ್ವದ ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಕನ್ನಡದ ಬಹುತೇಕ ಪತ್ರಿಕಗಳಲ್ಲಿ ಇವರ ಕಥೆ, ಕಾದಂಬರಿಗಳು ಪ್ರಕಟಗೊಂಡಿವೆ. ಈವರೆಗೆ ಐವತ್ತು ಕೃತಿಗಳನ್ನು ...
READ MORE