‘ಸೂತ್ರಧಾರ ಮತ್ತು ಇತರ ಕಥೆಗಳು’ ಕೃತಿಯು ಶೈಲಜಾ ಸುರೇಶ್ ರಾವ್ ನಾಯಕ್ ಅವರ ಕಥಾಸಂಕಲನವಾಗಿದೆ. ಹದಿಮೂರು ಕಥಾಗುಚ್ಛವನ್ನು ಹೊಂದಿರುವ ಈ ಕೃತಿಯಲ್ಲಿನ ಬಹುತೇಕ ಕತೆಗಳು ಉತ್ತಮ ಪುರುಷ ದಿಂದಲೇ ಆರಂಭವಾಗುತ್ತವೆ. ಕಂಡದ್ದು ಮತ್ತು ಹತ್ತಿರದಿಂದ ಅನುಭವಿಸಿದ ಸಂಗತಿಗಳನ್ನೇ ಅನ್ಯ ಹೆಸರುಗಳಿಂದ ಚಿತ್ರಿಸುವ ಈ ಕಥನ ಕ್ರಮವು ಸ್ವಗತದ ಧಾಟಿಯದ್ದಾಗಿದೆ. ಶೈಲಜಾ ಅವರ ಇಲ್ಲಿನ ಕಥನಕ್ರಮ ಸರಳವಾಗಿ ಮೂಡಿಬಂದಿದ್ದು, ಸಾಂಪ್ರದಾಯಿಕ ಕಥನ ಶೈಲಿಯನ್ನು ಒಳಗೊಂಡಿದೆ. ಎಲ್ಲೆಡೆ ನಡೆಯುವ, ಎಲ್ಲರಿಗೂ ಅನುಭವಕ್ಕೆ ಬರುವ ಘಟನಾವಳಿಗಳನ್ನೇ ಶೈಲಜಾ ಇವರು ಕಥೆಯನ್ನಾಗಿಸಿದ್ದಾರೆ. ‘ಕಾಣದ ಕೈ’ಯ ಅಮ್ಮನ ಪ್ರೀತಿ, ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’, ತ್ಯಾಗ ಮೊದಲಾದ ಕಥೆಗಳು ಚೆನ್ನಾಗಿವೆ. ‘ಫಣೀಂದ್ರನ ಗಲಿಬಿಲಿ ಸಂಸಾರ’ ಹಾಸ್ಯಮಯವಾಗಿ ಸಾಗಿದರೂ ಅಂತ್ಯವನ್ನು ಮಾತ್ರ ವಿಭಿನ್ನವಾಗಿ ಕಟ್ಟಿಕೊಡಲಾಗಿದೆ .
ಶೈಲಜಾ ಸುರೇಶ್ ರಾವ್ ನಾಯಕ್ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಚೊಚ್ಚಲ ಕಥಾಸಂಕಲನ ‘ಸೂತ್ರಧಾರ ಮತ್ತು ಇತರ ಕಥೆಗಳು’. ...
READ MORE