ಲೇಖಕ ಡಾ. ಸಿ.ಎಸ್. ದ್ವಾರಕನಾಥ ಅವರ ಕಥಾ ಸಂಕಲನ-ಸಾಕ್ಷೆಟೀಸ್ ಮತ್ತಿತರ ಕತೆಗಳು. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಾಗಳ ಜೋಡಣೆ, ಸಾಮಾಜಿಕ ಹೊಣೆಗಾರಿಕೆಯ ಎಚ್ಚರ ಇಂತಹ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.
ಸಾಮಾಜಿಕ ವಿದ್ಯಮಾನಘಳನ್ನು, ಆಚಾರ ವಿಚಾರಗಳನ್ನು ಮಾನವೀಯ ನೆಲೆಯಲ್ಲಿ ನೋಡಲಾಗಿದ್ದು, ಹೊಸ ಹಾಗೂ ಸಮಾನ ಸಮಾಜ ನಿರ್ಮಾಣದತ್ತ ಕತೆಗಳ ಆಶಯಗಳು ತುಡಿಯುತ್ತವೆ.
ಸಿ.ಎಸ್. ದ್ವಾರಕನಾಥ ಅವರು ವೃತ್ತಿಯಿಂದ ವಕೀಲರು. 2019ನೇ ಸಾಲಿನ ’ಅನಿಕೇತನ ಪ್ರಶಸ್ತಿ’ ಪುರಸ್ಕೃತರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು. 'ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ 2018' ಪ್ರಶಸ್ತಿ ಪುರಸ್ಕೃತರು. ವಾರ್ತಾ ಭಾರತಿ ದಿನಪತ್ರಿಕೆಯ ಅಂಕಣಕಾರರು. ಕೃತಿಗಳು: ಮೂಕ ನಾಯಕ ಹಾಗೂ ಭಾರತ ಸಂವಿಧಾನ : ಐತಿಹಾಸಿಕ ದಾಖಲಾತಿಗಳೊಂದಿಗೆ, ಗಾಂಧಿಮಟ್ಟಿದ ನಾಡಿನಲ್ಲಿ (ಪ್ರವಾಸ ಕಥನ) -ಇವರ ಕೃತಿಗಳು. ...
READ MORE