“ಶಿವಾಜಿ ಟೆಂಟ್” ಮಂಜುನಾಥ್ ಕುಣಿಗಲ್ ಅವರ ಕಥಾಸಂಕಲನ. ಇದರಲ್ಲಿನ ಹತ್ತೂ ಕಥೆಗಳಲ್ಲಿ ಲೇಖಕರೆ ಒಂದು ಪಾತ್ರ ಮತ್ತು ಅವಿಭಾಜ್ಯ ಅಂಗವಾಗಿ ನಿರೂಪಿಸುವಂತೆ ಭಾಸವಾಗುತ್ತದೆ. ಪುಸ್ತಕದಲ್ಲಿ ಬಾಲ್ಯವಿದೆ, ಹರೆಯವಿದೆ, ಯೌವನವಿದೆ, ವೃದ್ಧಾಪ್ಯವೂ ಇದೆ. ಎಲ್ಲ ಕಾಲದಲ್ಲೂ ಮನುಷ್ಯನನ್ನು ಕಾಡುವ, ಸೆಳೆಯುವ ಮುಗ್ಧತೆ, ಅವಸರ, ರೋಷ, ವಿನಾಕಾರಣ ಸೇಡು ಎಲ್ಲವೂ ಇವೆ. ಅಲ್ಲಲ್ಲಿ ನವಿರು ಹಾಸ್ಯವಿದೆ, ಬಾಲ್ಯದ ನಂಬಿಕೆಗಳ ಮೋದವಿದೆ. ಈ ಕೃತಿಯಲ್ಲಿ ಬಹಳ ಸುಂದರವಾಗಿ ಮತ್ತು ಸರಳವಾಗಿ ಪದ ಬಳಕೆ ಮಾಡಿರೂದರ ಜೊತೆಗೆ ಇಲ್ಲಿ ಬಳಸಿದ ಅಷ್ಟೂ ಹೆಸರುಗಳು ಪರಿಚಿತವೇನೋ ಎಂಬಂತಿದೆ. ಇಲ್ಲಿನ ತೊಡ್ರ, ಕೊಯಕ್ಲ, ಮಿಣ್ಣ, ಪಸ್ಲಿ, ವೈದ್ಯ ಯಾಲಕ್ಕಯ್ಯ ಇಂಥ ಹೆಸರುಗಳೆಲ್ಲ ನಮ್ಮ ಬಾಲ್ಯದ ಹಳ್ಳಿಗಳಲ್ಲಿ ಕೇಳಿರುವಂಥವು. ಇವೆಲ್ಲವೂ ಕತೆಗಳಿಗೆ ಸಹಜತೆಯನ್ನು ತಂದು ಕೊಟ್ಟಿರುವುದರಿಂದ ಓದುಗನಿಗೆ ಬಹಳ ಇಷ್ವವಾಗೂದಂತು ಖಂಡಿತ. ಎಲ್ಲ ಕಥೆಗಳಲ್ಲೂ ಇರುವ ಗಣಪನೆಂಬ ಹುಡುಗ ಇಡೀ ಪುಸ್ತಕವನ್ನು ಒಂದೇ ದಾರದಲ್ಲಿ ನೇಯ್ದಿಟ್ಟು ಒಂದು ಕಂಟಿನ್ಯುಟಿ ಕೊಡುವುದು ಸಂಕಲನದ ವಿಶೇಷ. ಇಂಥ ವಿಚಾರಗಳಿಂದಾಗಿ ಎಲ್ಲ ಕಥೆಗಳೂ ಒಂದೇ ಊರಿನ ಕತೆಯಂತೆ ಭಾಸವಾಗಿ ಓದುಗನನ್ನು ಹೊರಗೆ ಹಾರಲು ಬಿಡುವುದಿಲ್ಲ. ಅಂತೆಯೇ ಶಾಲೆಯೊಂದು ಪಾತ್ರವಾಗಿ ಇದೇ ರೀತಿಯ ಭಾವ ಕೊಡುವುದೂ ಹೌದು.
ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ 1982 ರಂದು ಜನನ. ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣ ಆಗಿದ್ದು ಕುಣಿಗಲ್ಲಿನಲ್ಲಿಯೇ. ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ಡಿಪ್ಲೋಮಾ ವ್ಯಾಸಂಗ ಆಗಿದ್ದು ತುಮಕೂರಿನ ಸರ್ಕಾರೀ ಪಾಲಿಟೆಕ್ನಿಕ್ ಕಾಲೇಜಿನಲ್ಲಿ. 2001ನೆಯ ಇಸವಿಯಲ್ಲಿ ಬಳ್ಳಾರಿಯ ಜಿಂದಾಲ್ ವಿಜಯನಗರ ಉಕ್ಕಿನ ಕಾರ್ಖಾನೆಯಲ್ಲಿ (ಜೆ ಎಸ್ ಡಬ್ಲ್ಯೂ) ಕಿರಿಯ ಇಂಜಿನಿಯರಾಗಿ ಕೆಲಸಕ್ಕೆ ಸೇರಿದ್ದು. ಅದಾದ ಐದು ವರ್ಷಗಳ ನಂತರ ಎಲ್&ಟಿ ಕಂಪನಿಗೆ ಸೇರಿ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯದಲ್ಲಿ ಎರಡು ವರ್ಷ ಇಂಜಿನಿಯರಾಗಿ ಕೆಲಸ. ತದನಂತರ ದುಬೈನಲ್ಲಿ ಕೆಲಸ ಮಾಡುವ ಅವಕಾಶ ...
READ MORE