'ಶರಣ ಸಂಸ್ಕೃತಿ ಕಥನ' ಲೇಖಕ ಎಚ್.ಟಿ. ಪೋತೆ ಅವರ ಕಥಾ ಸಂಕಲನ. ಇಲ್ಲಿನ ಕಥೆಗಳು ನೊಂದವರ ನೋವ ನೋಯದವರೆತ್ತ ಬಲ್ಲರು-ಎನ್ನುವ ಅಕ್ಕನ ಮಾತಿನಂತೆ, ದೀನ ದಲಿತರ ಮಹಿಳೆಯರಲ್ಲದೆ, ವೃತ್ತಿ ಮೂಲದವರಿಗೆ ಅಂಟಿಸಿದ ಅಪಮಾನ ನಿಂದನೆಗಳ ಸಿಕ್ಕನ್ನು ಬಿಡಿಸುವಲ್ಲಿ ಶ್ರಮಿಸಿದವರ ಕಥನಗಳು. ನೋವುಗಳೇ ಇಲ್ಲಿ ಅಕ್ಷರೂಪವನ್ನು ಪಡೆದಿದೆ. ಅವರೆಲ್ಲರ ಬದುಕು ನಮಗೆಲ್ಲ ಮಾದರಿಯಾಗಿ ಸಂವಹನ ನಡೆಸುತ್ತಲೇ ನಮ್ಮನ್ನು ಮನುಷ್ಯರನ್ನಾಗಿ ರೂಪಿಸುವ ಜೀವ ಸಂಕುಲದ ಕಥನಗಳಾಗಿವೆ.
ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...
READ MORE