1936ರಲ್ಲಿ ಮೊದಲ ಬಾರಿಗೆ ಪ್ರಕಟಣೆಗೊಂಡ ಸನ್ಯಾಸಿ ಮತ್ತು ಇತರ ಕಥೆಗಳು ಪುಸ್ತಕ ಈವರೆಗೆ ಹನ್ನೆರಡು ಪ್ರಕಟಣೆಗಳನ್ನು ಕಂಡಿದೆ. ಈ ಪುಸ್ತಕವು ಒಟ್ಟು ಎಂಟು ಕಥೆಗಳನ್ನು ಒಳಗೊಂಡಿದೆ. ಸನ್ಯಾಸಿ, ಕ್ರಿಸ್ತನಲ್ಲ ಪಾದ್ರಿಯ ಮಗಳು, ಈಶ್ವರನೂ ನಕ್ಕಿರಬೇಕು, ಆರಾಣೆ ಮೂರು ಕಾಸು, ಯಾರೂ ಅರಿಯದ ವೀರ, ಹೋಳಿಗೆ ಪ್ರತಿಜ್ಞೆ, ಮಾಯದ ಮನೆ, ದೆವ್ವದ ಕಾಟ ಹಾಗೂ ಶ್ರೀಮನ್ಮೂಕವಾಗಿತ್ತು ಕಥೆಗಳು ಈ ಪುಸ್ತಕದಲ್ಲಿ ಓದಲು ಸಿಗುತ್ತವೆ. ನಿಜವಾದ ಸನ್ಯಾಸಿ ಎಂದರೆ ಯಾರು ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕುವ ಕಥೆಯೇ ಸನ್ಯಾಸಿ. ಸನ್ಯಾಸತ್ವ ಯಾವ ರೀತಿ ಸಕಲ ಭೋಗಗಳಿಂದ ದೂರವಿರುವ ಲೀಲೆ ಎಂಬುದರ ವಿವರಣೆ ಈ ಕಥೆಯಲ್ಲಿದೆ. ಚೈತನ್ಯ ಹಾಗೂ ರಮೇಶ ಎಂಬ ಎರಡು ಪಾತ್ರಗಳ ನಡುವಿನ ದ್ವಂದ್ವವನ್ನು ಈ ಕಥೆಯಲ್ಲಿ ಸ್ವಾರಸ್ಯಕ್ರವಾಗಿ ವಿವರಿಸಲಾಗಿದೆ. ಅದೇ ರೀತಿ ಉಳಿದಿರುವ ಕಥೆಗಳು ಕೂಡ ಜೀವನದಲ್ಲಿ ಭಾವನೆಗಳ ಭಾವವನ್ನು ಪ್ರತಿಬಿಂಬಿಸುತ್ತವೆ. ಭಾವನೆಗಳ ಮಿಳಿತ ಈ ಕಥೆಗಳ ಸಾರ. ಕುವೆಂಪು ಅವರ ಇತರ ಬರೆವಣಿಗೆಗಳಂತೆ ಇಲ್ಲಿಯೂ ಪ್ರಕೃತಿಯ ವಿವರಣೆ ಮನಸ್ಸಿಗೆ ನಾಟುವಂತಿದೆ.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE