‘ಸನ್ಮಾರ್ಗ’ ಎ.ಸರಸಮ್ಮ ಅವರ ಕಥಾಸಂಕಲನ. ಹಲವು ಕಥೆಗಳನ್ನೊಳಗೊಂಡ “ಸನ್ಮಾರ್ಗ” ಕಥಾಸಂಕಲನ, ಸಮಾಜದ ಮತ್ತು ಸಂಸಾರದ ನೋವು ನಲಿವುಗಳಿಗೆ ಸ್ಪಂದಿಸುತ್ತದೆ. ಛಲ, ಸಹನೆ, ಧೈರ್ಯ, ದೃಢ ಮನಸ್ಸು ಮತ್ತು ಸ್ವಾಭಿಮಾನ ಇವುಗಳಿಂದ ಎಲ್ಲವನ್ನೂ ಸಾಧಿಸಬಹುದೆಂದು “ತಾಯಿ” ಕಥೆಯಲ್ಲಿ ವ್ಯಕ್ತವಾಗುತ್ತದೆ. ತಾಳ್ಮೆ ತಕ್ಷಣಕ್ಕೆ ಕಹಿಯಾಗಿದ್ದರೂ, ಅದರ ಫಲ ಯಾವಾಗಲು ಸಿಹಿಯಾಗಿರುತ್ತದೆಂದು “ಸಾಕ್ಷಾತ್ಕಾರ” ಕಥೆ ನಿರೂಪಿಸಿ, ತಂದೆ ತಾಯಿ ಮಗನನ್ನು ಒಂದುಗೂಡಿಸುವ ಮೂಲಕ ಬದುಕಿನಲ್ಲಿ ಒಲವು ಮೂಡಿಸುತ್ತದೆ.
ಸಾವು ಜೀವನದ ಪರಿಹಾರವಲ್ಲ, ಬದುಕಿದ್ದಾಗ ನಮ್ಮ ಸಂಬಂಧಗಳನ್ನು ಉಳಿಸಿ ಬೆಳಸಿಕೊಳ್ಳುವುದೇ ಜೀವನದ ಸಾರ್ಥಕತೆ, ಕಲ್ಪನಾ ಜೀವನಕ್ಕಿಂತ ನಿಜ ಜೀವನ ಸುಂದರವಾಗಿರುತ್ತದೆ. ಮನಸ್ಸನ್ನು ನಿಗ್ರಹಿಸಿಕೊಳ್ಳುವುದರ ಮುಖಾಂತರ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದೆಂಬುದನ್ನು ಇಲ್ಲಿನ ಕಥೆಗಳು ಮನದಟ್ಟು ಮಾಡಿಸುತ್ತವೆ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE