ಕೆ.ವಿ.ಅಯ್ಯರ್ ಅವರು ಬರೆದ ಸಣ್ಣ ಕಥೆಗಳ ಸಂಕಲನ-ಸಮುದ್ಯತಾ. ಈ ಸಂಕಲನದ ಮೊದಲ ಕಥೆಯೇ ಸಮುದ್ಯತಾ. ನಂಬಿಕೆಯನ್ನು ಆಧರಿಸಿ, ಜೀವನದಲ್ಲಿ ಅದರ ಮಹತ್ವ ತಿಳಿಸುವ ಕಥೆ ಇದು. ಸುಮಾರು ವರ್ಷಗಳ ಹಿಂದೆ ನಡೆದ ಒಂದು ಘಟನೆ-ಸನ್ನಿವೇಶವು ಮತ್ತೆ ಮರುಕಳಿಸುತ್ತದೆ. ಅದು ಇತಿಹಾಸವಾಗಿ ಮರೆತಿದ್ದೇವೆ ಎನ್ನಿಸುವಷ್ಟರಲ್ಲೇ ಮತ್ತೆ ಅದೇ ಘಟನೆ-ಸನ್ನಿವೇಶವು ವರ್ತಮಾನವಾಗಿ ಕಾಡುತ್ತದೆ. ನಂಬಲು ಅಸಾಧ್ಯವಾದರೂ ಸಾಧ್ಯವಾಗಿಸುವ ಇಂತಹ ಘಟನೆಗಳು ಸಮುದ್ಯತಾ ಕಥೆಯ ಮೂಲ ತಿರುಳು. ಚೇಳು ಮತ್ತು ಅಜ್ಜನ ಕಥೆ ಸಹ ಇಂತಹದ್ದೇ ಆದ ಕುತೂಹಲ ಕೆರಳಿಸುವ ಕಥೆ. ಸಂಕಲನದ ಒಟ್ಟು 11 ಕಥೆಗಳ ಪೈಕಿ ವಿಷಬೆಳಸು, ಮನೆಯ ಮುಂದೆ ಮಕ್ಕಳು, ಅನಾಥೆ ಅನಸೂಯೆ ಹೀಗೆ ಪ್ರತಿ ಕಥೆಯೂ ತನ್ನದೇ ವಸ್ತು ವೈವಿಧ್ಯತೆಯಿಂದ ಗಮನ ಸೆಳೆಯುತ್ತವೆ. 1950 ರಲ್ಲಿ ಮೊದಲು ಮೈಸೂರಿನ ಉಪಾ ಸಾಹಿತ್ಯಮಾಲೆ ಪ್ರಕಟಿಸಿತ್ತು. ನಂತರ ಮೈಸೂರು ವಿ.ವಿ. ಈ ಕೃತಿಯನ್ನು ಪದವಿಗೆ ಪಠ್ಯವಾಗಿರಿಸಿತ್ತು.
ಕೆ. ವಿ. ಅಯ್ಯರ್ ಜನಿಸಿದ್ದು ಜನವರಿ 8, 1894ರಲ್ಲಿ. ಮೂಲತಃ ಕೋಲಾರ ಜಿಲ್ಲೆಯ ದೇವಸಮುದ್ರದವರು. ಬೆಂಗಳೂರಿನ ಕೋಟೆ ಬಳಿಯ ಎ.ವಿ.ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ, ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ಕಡು ಬಡತನದ ಮಧ್ಯೆ ಪದವಿ ಪಡೆಯಲಿಲ್ಲ. ಆದರೆ, ಅಮೆರಿಕದ PHYSICAL CULTURE NATUROPATHYಯ ಅಕಾರ ಪತ್ರ ಪಡೆದು ತಾವೇ ಪ್ರೊಫೆಸರ್ ಎಂದು ಕರೆದುಕೊಂಡರು. ಛಾಯಾಚಿತ್ರಗ್ರಾಹಕರು. ರೇಡಿಯೋ ರಿಪೇರಿ, ಸ್ವರಲೇಖನ ಯಂತ್ರ ರಿಪೇರಿ ನಿಪುಣತೆ.ಇತ್ತು. ಉತ್ತಮ ವ್ಯಾಯಾಮ ಶಿಕ್ಷಕರು. ಮಹಾರಾಜ ಕೃಷ್ಣರಾಜ ಒಡೆಯರು ಇವರ ವ್ಯಾಯಾಮ ಕಲೆಗೆ ಮಾರು ಹೋಗಿದ್ದರು. ಕೈಲಾಸಂ ಅವರು ಇವರಿಗೆ ಸಾಹಿತ್ಯದ ಗೀಳು ಹಚ್ಚಿದರು. ರೀಡರ್‍ಸ್ ಡೈಜಿಸ್ಟ್ ...
READ MORE