ಕತೆಗಾರ ಎಂ.ಎಸ್. ಶ್ರೀರಾಮ್ ಅವರ ನಾಲ್ಕನೆಯ ಕಥಾಸಂಕಲನ. ಈ ಸಂಕಲನದಲ್ಲಿ ಒಟ್ಟು ಆರು ಕತೆಗಳಿವೆ. ‘ಸುದ್ದಿ: ಇದು ಸುದ್ದಿ’ ಕತೆಯು ಹೆಸರೇ ಸೂಚಿಸುವಂತೆ ಮಾಧ್ಯಮ ಕೇಂದ್ರವಾಗಿಟ್ಟುಕೊಂಡ ಕತೆ ಎಂಬಂತೆ ಭಾಸವಾದರೂ ಕೇವಲ ಅಷ್ಟಕ್ಕೇ ನಿಲ್ಲುವುದಿಲ್ಲ. ರಾಜಕಾರಣದ ಒಳಸುಳಿ, ಪೊಲೀಸ್ ಅಧಿಕಾರಿಗಳನ್ನು ಮತ್ತು ಮಾಧ್ಯಮಗಳನ್ನು ಬಳಸಿಕೊಳ್ಳುವ ರೀತಿಯನ್ನು ಸೊಗಸಾಗಿ ಚಿತ್ರಿಸಲಾಗಿದೆ. ಸುದ್ದಿ ಪಡೆಯುವ ತಿರುವು ಮತ್ತು ತಲುಪುವ ಅಂತಿಮ ಘಟ್ಟದ ವರೆಗೆ ಕುತೂಹಲ ಉಳಿಸಿಕೊಂಡು ಹೋಗುತ್ತದೆ.
ಎರಡನೇ ಕತೆ ‘ಅಸ್ತಿತ್ವ’ಕ್ಕೆ ಮೂರು ಅಥವಾ ಅದಕ್ಕಿಂತ ಹೆಚ್ಚು ಆಯಾಮಗಳಿವೆ. ಈ ಕತೆ ಕಟ್ಟುವ ಕುರಿತು ಶ್ರೀರಾಮ್ ಬರೆದ ‘ಕತೆ ಕಟ್ಟುವ ಪರಿ- ಅಸ್ತಿತ್ವ ಕತೆಯ ಬಗ್ಗೆ ಕೆಲವು ಟಿಪ್ಪಣಿಗಳು’ ಎಂಬ ಬರಹ ಕೂಡ ಸೇರಿಸಲಾಗಿದೆ ಸಂಕಲನದ ಶೀರ್ಷಿಕೆಯನ್ನು ಹೊಂದಿರುವ ಕತೆಯು ನಟ ಸಲ್ಮಾನ್ ಖಾನ್ ಗೆ ಅಭಿಮಾನಿ ಯುವತಿಯೊಬ್ಬಳು ಬರೆದ ಪತ್ರವನ್ನು ಇಟ್ಟುಕೊಂಡು ಸೊಗಸಾದ ರೀತಿಯಲ್ಲಿ ಕತೆ ಹೆಣೆಯಲಾಗಿದೆ. ಸಣ್ಣ ಮಟ್ಟದ ಸಾಲ ನೀಡುವ ಸಂಸ್ಥೆಗಳನ್ನು ಕುರಿತಾದ ‘ಮುಂದುವರೆಯುವುದು’ ಕತೆಯು ಕ್ರೌರ್ಯವನ್ನು ಅನಾವರಣ ಮಾಡುತ್ತದೆ. ‘ಒಂದು ಇಂಡಿಯನ್ ಇಂಗ್ಲಿಷ್ ಕಥೆ’ಯಲ್ಲಿ ಕುಟುಂಬದಲ್ಲಿ ಕಾಣಿಸಿಕೊಳ್ಳುವ ಸಣ್ಣ ಭಿನ್ನಾಭಿಪ್ರಾಯ ಬೆಳೆಯುವ ರೀತಿ ಅದನ್ನು ಕತೆಯಾಗಿ ಕಟ್ಟುವ ಕ್ರಮ ಪ್ರಿಯವಾಗುತ್ತದೆ. ‘ಒಬ್ಬ ವಿಚಿತ್ರ ಮಿತ್ರ; ಅವನದೊಂದು ಪತ್ರ’ ಪತ್ರವನ್ನು ಕೇಂದ್ರವಾಗಿಟ್ಟು ಕಟ್ಟಲಾದ ಸೊಗಸಾದ ಕತೆ. ಈ ಸಂಕಲನದ ಕತೆಗಳ ಓದು ಓದುಗನಿವೆ ಒಂದು ವಿಶಿಷ್ಟ ಅನುಭವ ಒದಗಿಸುವಲ್ಲಿ ಯಶಸ್ವಿಯಾಗಿವೆ.
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ (1962) ಎಂ.ಎಸ್. ಶ್ರೀರಾಮ್ ಅವರು ಶಿಕ್ಷಣ ಪಡೆದದ್ದು ಉಡುಪಿ, ಬೆಂಗಳೂರು, ಮೈಸೂರು ಮತ್ತು ಆನಂದ್ ದಲ್ಲಿ. ಹೈದರಾಬಾದ್ ನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದ ಅವರು ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಂದ ಡಾಕ್ಟರೇಟ್ ಪಡೆದರು. ಆಮೇಲೆ ಆನಂದದ ಇನ್ಸ್ ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟ್ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದ್ ನ ಬೇಸಿಕ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರೊಫೆಸರ್ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ-2013