ರಾಘವೇಂದ್ರ ಪಾಟೀಲರ ಆಯ್ದ ಕಥೆಗಳು

Author : ರಾಘವೇಂದ್ರ ಪಾಟೀಲ

Pages 277

₹ 200.00




Year of Publication: 2018
Published by: ಸಪ್ನ ಬುಕ್ ಹೌಸ್

Synopsys

ಆಡುಭಾಷೆಯ ಒರಟೂ ಸಹ ಅಂತಃಕರಣದಿಂದ ಮನವನ್ನು ಮೆಲ್ಲನೆ ನೇವರಿಸಿ ಚಪ್ಪರಿಸುವ ಅನುಭವ. ಅಪ್ಪಟ ಗ್ರಾಮೀಣ ಪರಿಸರದ ಕತೆಗಳಾಗಲಿ, ಸುಧಾರಿಸಿದ , ಸುಧಾರಣೆ ಹೊಂದುತ್ತಿರುವ ನಗರ ಪ್ರದೇಶದ ಚಿತ್ರಣವೇ ಆಗಲಿ ಅಷ್ಟೇ ಕಕ್ಕುಲತೆಯಿಂದ ಹೃದಯವನ್ನು ಒದ್ದೆ ಮಾಡುವ ಕತೆಗಳು. ಬಾಲ್ಯದ ಮುಗ್ಧ ಅನಿಸಿಕೆಗಳು, ಯೌವನದ ಹುಚ್ಚು ಹೊಳೆಗಳು,ಮುದಿತನದ ಅಸಹಾಯಕ ಅಧಿಕಾರಗಳು, ನಿಸ್ಸಹಾಯಕ ಮನಸ್ಸುಗಳು, ಎತ್ತಲಿಂದೆತ್ತೋ ಓಡುವ ಭಾವನೆಗಳು- ಬಾಳಹಾದಿಯ ಹೂಹಾಸುಗಳು, ಗಿರಿಕಂದರಗಳು ,ಮುಳ್ಳುಗೀರುಗಳು ಏನೆಲ್ಲವನ್ನೂ ಹದನಾಗಿ ಬೆರೆಸಿ ಪಾಟೀಲರು ನಮ್ಮೆದುರು ಯಾವುದೇ ಬೆಡಗಿಲ್ಲದೇ ಇರಿಸಿದ ಈ ಕಥಾ ರಸಪಾಕಗಳನ್ನು ತುಣುಕು ತುಣುಕಾಗಿ,ಹನಿಹನಿಯಾಗಿ ನಾಲಿಗೆಯ ಮೇಲೆ ಹೊರಳಾಡಿಸುತ್ತ , ಗಂಟಲಿನ ಕೆಳಗಿಳಿಸುತ್ತ ಆಹಾ ಒಂದೊಂದೂ ತಾಯಿಯ ಕೈತುತ್ತಿನ ಪುಳಕದ ಅನುಭೂತಿ ! ಭಾವಬುದ್ಧಿ ಹೃದಯಗಳ ಮಂಥನದಲ್ಲಿ ಮೃದುವಾಗಿ ಎದ್ದು ಬೇರೆಯಾಗಿ ನಿಲ್ಲುವ ತಾಜಾ ಬೆಣ್ಣೆಯ ಮೆತ್ತನೆಯ ಚಪ್ಪರಿಕೆ !! ರಾಘವೇಂದ್ರ ಪಾಟೀಲರ ಆಯ್ದ12 ಕತೆಗಳ ಸಂಕಲನವಿದು.

About the Author

ರಾಘವೇಂದ್ರ ಪಾಟೀಲ
(16 April 1951)

ಕನ್ನಡದ ಸೃಜನಶೀಲ ಬರಹಗಾರ ರಾಘವೇಂದ್ರ ಪಾಟೀಲರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನವರು. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಅಧ್ಯಾಪಕ, ಪ್ರಾಂಶುಪಾಲರಾಗಿಯೂ ದುಡಿದವರು. ಬಾಲ್ಯದಿಂದಲೂ ಬರೆಹದ ತುಡಿತವಿದ್ದ ಅವರು ಕಥಾರಚನೆಯಿಂದ ಕಾದಂಬರಿ, ಪ್ರವಾಸಸಾಹಿತ್ಯ, ವಿಮರ್ಶೆ ಇನ್ನಿತರ ಪ್ರಕಾರಗಳತ್ತ ವಿಸ್ತಾರಗೊಂಡು ಹಲವು ಕೃತಿಗಳನ್ನು ರಚಿಸಿದ್ದಾರೆ.  ‘ಒಡಪುಗಳು, ಪ್ರತಿಮೆಗಳು, ಮಾಯಿಯ ಮುಖಗಳು, ದೇಸಗತಿ’ ಅವರ ಕತಾ ಸಂಕಲನಗಳಾದರೆ ‘ಬಾಳವ್ವನ ಕನಸುಗಳು, ತೇರು’ ಕಾದಂಬರಿಗಳು. ಜೊತೆಗೆ ಆನಂದಕಂದರ ಬದುಕು-ಬರಹ, ವಾಗ್ವಾದ ಅವರ ವಿಮರ್ಶಾಕೃತಿಗಳು. ಕಥೆಯ ಹುಚ್ಚಿನ ಕರಿಟೊಪಿಗಿಯರಾಯ, ತುದಿಯೆಂಬ ತುದಿಯಿಲ್ಲ ಪಾಟೀಲರ  ನಾಟಕಗಳು, ಇವರ ತೇರು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.  ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ...

READ MORE

Related Books