ಲೇಖಕಿ ಸುನಂದಾ ಕಡಮೆ ಅವರ ಕಥಾ ಸಂಕಲನ ’ಪುಟ್ಟ ಪಾದದ ಗುರುತು’. ಬದುಕಿನ ಗುಣವನ್ನು ಆಪ್ತವಾಗಿ ಹೆಚ್ಚಿಸುವ ಪ್ರಾಮಾಣಿಕ ಬರಹವೆಂದು ಹೇಳಬಹುದಾದ ಕತೆಗಳನ್ನು ಲೇಖಕಿ ಓದುಗರಿಗೆ ನೀಡಿದ್ದಾರೆ. ಇವರ ಕತೆಯಲ್ಲಿ ಕಾಣಬಹುದಾದ ಸೂಕ್ಷ್ಮತೆಗಳು, ಮೌನ ಪ್ರತಿಭಟನೆಗಳು ಇವರ ಕತೆಗಳಲ್ಲಿ ಉದ್ದೇಶಪೂರ್ವಕವಾಗಿಯೇ ಸಹಜವೆಂಬಂತೆ ಮೂಡಿಬಂದಿದೆ. ಹೆಣ್ಣಿನ ಮನಃಸ್ಥಿತಿಗಳೊಂದಿಗೆ , ಸಂವೇದನೆಯೊಂದಿಗೆ ಇಲ್ಲಿನ ಕತೆಗಳು ಮುಖಾಮುಖಿಗೊಳ್ಳುತ್ತವೆ. ”
’ಆಳವಾದ ತಾಯ್ತನ ಮತ್ತು ಹದಿಹರೆಯದ ಕಣ್ಣಿನ ಫಳ ಫಳ ಚೈತನ್ಯ ಇವುಗಳ ಅಪರೂಪದ ಸಂಗಮದಲ್ಲಿ ಅಪಸ್ವರವಿಲ್ಲದೆ ಅರಳಿರುವ ಸುನಂದಾರ ಪ್ರಾಮಾಣಿಕ ಕತೆಗಳು ನಮ್ಮ ಬದುಕಿನ ಗುಣವನ್ನು ಆಪ್ತವಾಗಿ ಹೆಚ್ಚಿಸುತ್ತವೆ’. – ಜಯಂತ್ ಕಾಯ್ಕಿಣಿ ಅವರ ಮುನ್ನುಡಿಯಿಂದ.
ಕಥೆಗಾರ್ತಿ ಸ್ತ್ರೀವಾದಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವು ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು ಇವು ನಾಲ್ಕು ಕಾದಂಬರಿಗಳು. ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳು ಹೊರಬಂದಿವೆ. ಇವರಿಗೆ ಗುಡಿಬಂಡೆ ...
READ MOREಛಂದ ಪುಸ್ತಕ ಬಹುಮಾನ