‘ಪುಲ್ವಾಮ’ ಸುಬ್ರಾವ ಕುಲಕರ್ಣಿ ಅವರ 8ನೇ ಕಥಾಸಂಕಲನ. ಮನುಷ್ಯರ ಸ್ವಾರ್ಥ, ದುರಾಸೆಯನ್ನು ಮೀರಿ ಮಾನವೀಯ ತತ್ವಗಳಷ್ಟೆ ಮುಖ್ಯ ಎಂದು ಪ್ರತಿಪಾದಿಸುವ ಇಲ್ಲಿಯ ಕಥೆಗಳು ಸರಳವಾಗಿ ಓದಿಸಿಕೊಂಡು ಹೋಗುತ್ತವೆ. ಈ ಮೀರುವಿಕೆ ಹಲವು ಸಲ ಯಶಸ್ಸನ್ನೂ ಕೆಲ ಸಲ ದುರಂತವನ್ನೂ ಉಳಿಸಿ ಹೋಗುವದು. ಆದರೆ, ಮೀರುವ ಉತ್ಸಾಹ ಮಾತ್ರ ಇಲ್ಲಿಯ ಪಾತ್ರಗಳಲ್ಲಿ ತಣಿಯುವುದಿಲ್ಲ.
ಸಾಹಿತಿ, ಕತೆಗಾರ, ನಾಟಕಕಾರರಾಗಿ ಕನ್ನಡ ನಾಡಿಗೆ ಪರಿಚಿತರಾದ ಸುಬ್ರಾವ ಕುಲಕರ್ಣಿ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಸಿಡೋಣಿಯವರು. ಹೊಸ ಜನರ ಸಂಸ್ಕೃತಿ-ಪರಿಸರವನ್ನು ಅರಿಯುವ ತುಡಿತವಿದ್ದು ಪೂರಕವಾಗಿ ಸುಬ್ರಾವ ಅವರು ದೇಶ ವಿದೇಶಗಳನ್ನು ಭೇಟಿ ನೀಡುತ್ತಾರೆ. ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿನಲ್ಲಿ ಉದ್ಯೋಗ ಪ್ರಾರಂಭಿಸಿದರು. ನಂತರ ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ (ಐ.ಟಿ.ಐ) ವಿವಿಧ ಹುದ್ದೆಗಳಲ್ಲಿ ಸೇವೆಗೈದು ಪ್ರಾಂಶುಪಾಲರಾಗಿ 1999ರಲ್ಲಿ ಸೇವೆಯಿಂದ ನಿವೃತ್ತಿಯಾದರು. ಸಾಹಿತ್ಯ, ನಾಟಕ, ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ. ‘ತೃಪ್ತಿ, ರೇವೆ, ಮಲಪ್ರಭೆ, ಮದನಿಕೆ, ರಾಗದರ್ಬಾರಿ, ಸಂತೆ, ಭಾಗೀರಥಿ ಚಾಳ, ಪುಲ್ವಾಮ’ ಅವರ ಕಥಾ ಸಂಕಲನಗಳು. ‘ಸಾಗರದ ಈಚೆ-ಆಚೆ’ ಅವರ ...
READ MORE