ಪೆನ್ನು ಪೇಪರ್

Author : ಶಿವಾಗ್

Pages 128

₹ 160.00




Year of Publication: 2022
Published by: ಪಿನಾಕಿ ಪುಸ್ತಕ
Address: ಗಿರಿನಗರ, ಬೆಂಗಳೂರು
Phone: 9739998917

Synopsys

ಪೆನ್ನು ಪೇಪರ್ ಕಥಾಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಇವೆಲ್ಲವೂ ಶಾರ್ಟ್ ಫಿಲ್ಮ್ ಆಗಬೇಕಿದ್ದ ಕಥೆಗಳು. ಕಾರಣಾಂತರಗಳಿಂದ ಅವು ಈಗ ಓದುಗನ ಕೈಯಲ್ಲಿ ಅಕ್ಷರ ರೂಪ ಪಡೆದು ನಿಂತಿವೆ. ಪೆನ್ನು ಪೇಪರ್ ಕಥೆಯೊಂದು ಸೈಕಾಲಜಿಕಲ್ ಥ್ರಿಲ್ಲರ್. ಅನಿಕೇತ ಎಂಬ ಕಥೆಯಲ್ಲಿ ಹೆಸರೇ ಗೊತ್ತಿಲ್ಲದೆ ಕಳೆದುಹೋದ ಒಬ್ಬ ಹುಡುಗನನ್ನು ಹುಡುಕುವ ಮನೋಹರನ ಪಾತ್ರವು ಅಂತ್ಯದಲ್ಲೊಂದು ಅಚ್ಚರಿ ಮೂಡಿಸುತ್ತದೆ. ಇದರೊಳಗಿನ ಒಳಾರ್ಥಗಳು ಅಷ್ಟು ಸುಲಭವಾಗಿ ತೆರೆದುಕೊಳ್ಳುವುದಿಲ್ಲ. ಹಕ್ಕಿಗೆ ರೆಕ್ಕೆ ಬಂದ ಮೇಲೆ ಎಂಬ ಕಥೆಯಲ್ಲಿ ತಂದೆ ತಾಯಿ ಇಟ್ಟ ಮಂಜನಾಥನೆಂಬ ಹೆಸರನ್ನು ಬದಲಿಸಿ ಆದಿಯಾಗಿ ಬೆಂಗಳೂರಿಗೆ ಕಾಲಿಟ್ಟು ತನ್ನ ಹೊಸ ಬದುಕು ಕಟ್ಟುವಲ್ಲಿ ಎಡವಿ, ಮಹಾನಗರಿಯಲ್ಲಿ ಕಳೆದುಹೋಗಿ ಮತ್ತೆ ಮಂಜುನಾಥನಾಗಿ ಹತ್ತು ವರ್ಷಗಳ ನಂತರ ತಂದೆಯೊಟ್ಟಿಗೆ ಮಾತಾನಾಡುತ್ತಾನೆ. ಸಿಹಿ ಚಕ್ಕುಲಿ ಈ ರೀತಿಯ ತಿನಿಸು ಇಲ್ಲವೆಂದು ಯೋಚಿಸದಿರಿ ಇದರಲ್ಲಿ ಎಳೆವಯಸ್ಸಿನ ಮಕ್ಕಳ ಮೇಲಾಗುವ ತಾರತಮ್ಯದ ಪರಿಯನ್ನು ಎಳೆಯೆಳೆಯಾಗಿ ಬಿಡಿಸಲಾಗಿದೆ. ಮಣ್ಣಿನ ಹುತ್ತ ಈ ಕಥೆಯಲ್ಲಿ ಬರುವ ರಾಮ ಹಾವಿಗೆ ಹುತ್ತವ ಕಟ್ಟಲು ನಿರ್ಧರಿಸುತ್ತಾನೆ ಆದರೆ ಅದರ ಪರಿಣಾಮ ಅವನ ಜೀವನವನ್ನು ತಲೆಕೆಳಗಾಗಿಸುತ್ತದೆ. ಜನಗಳ ಮಾತಿಗೆ ಕಿವಿಕೊಟ್ಟ ಇವನ ಬುದ್ದಿಗೆ ಗೆದ್ದಲು ಹಿಡಿದು ತನ್ನ ತಲೆಯೊಳಗೆ ಕಟ್ಟಿಕೊಳ್ಳುವ ಮಣ್ಣಿನ ಹುತ್ತವೇ ಇದರ ಅರ್ಥ. ಡುಗ್ಗು ಉಗ್ಗು ರೋಷನ್ ಇದೊಂದು ಫ್ಯಾಮಿಲಿ ಡ್ರಾಮಾ. ಇದರಲ್ಲಿನ ಶಶಿಯ ಪಾತ್ರವನ್ನು ವಿವರಿಸಿಲೆಂದೆ ಮೂರ್ನಾಲ್ಕು ದೃಶ್ಯಗಳು ಹೆಣೆಯಲಾಗಿದೆ. ಈ ಮೂರ್ಕತೆ ನಮ್ಮೂರ್ ಕಥೆ ಇಲ್ಲಿ ಮೂರು ಕಥೆ ಇವೆ ಮತ್ತು ಅವುಗಳಲ್ಲಿ ಮೂರ್ಖತೆಯೂ ಕೂಡ ಇದೆ. ಜೂಜುಕೋರರ ಕ್ರಾಸಿನಲ್ಲಿ ಇದರ ಅರ್ಥ ತಿಳಿದವರಿಗೆ ಇದು ಯಾವ ಕಥೆ ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಇದರಲ್ಲಿ ಬರುವ ರಾಜಿಯೆಂಬ ಪಾತ್ರವು ಹೇಳುವ ಕಥೆಯು ಅವಳು ಎಲ್ಲಿಯೋ ಓದಿದ್ದಾಗಿದ್ದು, ಎಲ್ಲಿಯೋ ಕೇಳಿದ್ದಾಗಿರುತ್ತದೆ. ಇಲ್ಲಿ ನಕಲುತನದ ಪ್ರಶ್ನೆಯೆ ಬರುವುದಿಲ್ಲ. ಕೊನೆಯದಾಗಿ ನೀನು ಬ್ರಾಹ್ಮಣನೇ ತಾನೇ ಈ ಕಥೆಯು ನಾನ್ ಲೀನಿಯರ್ ಶೈಲಿಯಲ್ಲಿದ್ದು ಅಂತ್ಯವಿಲ್ಲದೆ ಮುಗಿದರು ಮುಗಿಯದ ಕಥೆ. ಇದಲ್ಲದೆ ಉಳಿದ ಎಲ್ಲಾ ಕಥೆಗಳಲ್ಲಿರುವ ಹಿಡನ್ ಡಿಟೈಲ್ಸ್ ಓದುಗನಿಗೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಓಪನ್ ಎಂಡೆಡ್ ಕ್ಲೈಮ್ಯಾಕ್ಸ್, ನಾನ್ ಲೀನಿಯರ್, ಹಾಗೂ ಶಾರ್ಟ್ ಫಿಲ್ಮ್ ನಾ ಕಾನ್ಸೆಪ್ಟ್ ಓದುಗರಿಗೆ ಹೊಸ ರೀತಿಯ ಅನುಭವ ಕೊಡಬಹುದು.

About the Author

ಶಿವಾಗ್
(12 May 1993)

ಶಿವಾಗ್ ಹುಟ್ಟಿದ್ದು ಮಂಡ್ಯದಲ್ಲಿ, ಬೆಳೆದಿದ್ದೆಲ್ಲ ಬೆಂಗಳೂರು. ವಿವೇಕಾನಂದ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿದ ನಂತರ ಸಿನಿಮಾ ಕ್ಷೇತ್ರದಲ್ಲಿ ಹಲವಾರು ಸಿನಿಮಾಗಳಿಗೆ ನಿರ್ದೇಶನದ ತಂಡದಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಕಿರುಚಿತ್ರಗಳ ನಿರ್ದೇಶನ, ಕಥೆ, ಕಾದಂಬರಿ ಬರೆಯುವಲ್ಲಿ ಮತ್ತು ಓದುವುದರಲ್ಲಿ ಸಕ್ರಿಯವಾಗಿದ್ದಾರೆ. ಕೃತಿಗಳು:- ಪೆನ್ನು ಪೇಪರ್ (ಕಥಾಸಂಕಲನ) ಫೈಂಡಿಂಗ್ ಸೀತಾ (ಕಾದಂಬರಿ) ...

READ MORE

Excerpt / E-Books

https://imojo.in/PfIbmv

Related Books