‘ಪಟ್ಟಣದ ಕತೆಗಳು’ ಪುಂಡಲೀಕ ಕಲ್ಲಿಗನೂರ ಅವರ ಕಥಾಸಂಕಲನವಾಗಿದೆ. ಒಟ್ಟು ನಲವತ್ತೈದು ಕತೆಗಳ ಗುಚ್ಛವಿದು. ಇದರಲ್ಲಿ ಎರಡು ರೀತಿಯ ಕತೆಗಳಿವೆ. ಮೊದಲ ಭಾಗ 'ಹುಚ್ಚರ ಸಂತಿ'ಯಲ್ಲಿ ಹತೊಂಬತ್ತು ಕತೆಗಳಿವೆ. ಎರಡನೆಯ ಭಾಗ 'ಪಟ್ಟಣದ ಕತೆಗಳು'. ಇಲ್ಲಿ ಇಪ್ಪತ್ತಾರು ಕತೆಗಳಿವೆ. ಇಲ್ಲಿಯ ವ್ಯಕ್ತಿಗಳು ಮತ್ತು ಘಟನೆಗಳೆಲ್ಲಾ ಅಲ್ಲಲ್ಲಿಗೇ ಸೀಮಿತವಾದವುಗಳಲ್ಲ, ಕತೆಗಳಾಚೆಯೂ ಬದುಕಿವೆ, ಬೆಳೆದಿವೆ.
ರೇಖಾಚಿತ್ರ ಕಲಾವಿದ ಹಾಗೂ ಸಾಹಿತಿ ಪುಂಡಲೀಕ ಕಲ್ಲಿಗನೂರ ಅವರು ಗದಗ ಜಿಲ್ಲೆಯ ಗಜೇಂದ್ರಗಡದವರು. ತಂದೆ ವೀರಪ್ಪ, ತಾಯಿ ಮಲ್ಲಮ್ಮ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರ ರೇಖಾಚಿತ್ರಗಳು ಬೆಳಕು ಕಂಡಿವೆ. ಪುಸ್ತಕಗಳಿಗೆ ಮುಖಪುಟಗಳನ್ನು ರಚಿಸಿದ್ದಾರೆ. ಕೃತಿಗಳು: ಸಲಿಲಧಾರೆ, ಪ್ರೀತಿಮಳೆ (ಕವನ ಸಂಕಲನಗಳು), ದುರ್ಗಮ (ನಾಟಕ) ಕಾಡು ನಮ್ಮ ನಾಡು (ಮಕ್ಕಳ ನಾಟಕ) ಅರಿವೇ ಗುರು (ಪ್ರಬಂಧಗಳು) ಪ್ರಭಾತ್ ಸರ್ಕಸ್ (ಕಥಾಸಂಕಲನ) ಬೇಲೂರು ಹಳೇಬೀಡು – ಶಿಲ್ಪಕಲಾ ಸಾಮ್ರಾಜ್ಯ (ಪರಂಪರೆ ಕಳಕಳಿಯ ಲೇಖನಗಳು), "ಶಿಲ್ಪಕಲಾ ದೇಗುಲಗಳು" ಗ್ರಂಥಕ್ಕೆ ಇತ್ತೀಚೆಗಷ್ಟೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಲಂಕೇಶ್ ಪತ್ರಿಕೆಯ ನೀಲು ಕವಿತೆಗಳಿಗೆ ಇವರದೇ ರೇಖಾ ಚಿತ್ರ ...
READ MORE