ಉತ್ಥಾನ ಮಾಸಪತ್ರಿಕೆಯಲ್ಲಿ ‘ಪರಕಾಯ ಪ್ರವೇಶ’ ಶೀರ್ಷಿಕೆಯಡಿ ಅಂಕಣ ರೂಪದಲ್ಲಿ ಪ್ರಕಟವಾದ ಕಥೆಗಳ ಸಂಕಲನ. ಸ್ವತಃ ಅರ್ಥದಾರಿ ಕಲಾವಿದರಾಗಿರುವ ರಾಧಾಕೃಷ್ಣ, ಪುರಾಣ ಕಥೆಗಳ ರೂಪದಲ್ಲಿ ಇಲ್ಲಿನ ಕಥೆಗಳನ್ನು ರಚಿಸಿದ್ದಾರೆ. ‘ಇಲ್ಲಿ ನಾನು ಪಾತ್ರಗಳ ಸಮರ್ಥನೆಗೆ ಹೊರಟವನಲ್ಲ ಅವುಗಳಷ್ಟಕ್ಕೆ ಅವುಗಳೇ ತಮ್ಮನ್ನು ತೆರೆದುಕೊಳ್ಳುವ ರೀತಿ ಇದು. ಎಲ್ಲಿ ಮೌನವಾಗಿದೆಯೇ ಅಲ್ಲಿ ಅಷ್ಟಿಷ್ಟು ಸ್ವಾತಂತ್ರ್ಯ ವಹಿಸಿದ್ದೇನೆ, ಪಾತ್ರಗಳ ಅಂತರಂಗದ ತುಮುಲಗಳನ್ನು ಪ್ರಕಟಿಸುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ ಲೇಖಕ ರಾಧಾಕೃಷ್ಣ ಕಲ್ಚಾರ್. ಕಲಾವಿದನೊಬ್ಬ ಜೀವ ತುಂಬಬಹುದಾದ ಇಲ್ಲಿಯ ಕಥೆಗಳು ಓದುಗರನ್ನು ಸೆಳೆಯುತ್ತವೆ.
ರಾಧಾಕೃಷ್ಣ ಕಲ್ಚಾರ್ ಅವರು ಸುಳ್ಯ ತಾಲೂಕಿನ ಪಂಜ ಗ್ರಾಮದ ಕಲ್ಚಾರ್ ಎಂಬಲ್ಲಿ ಜನಿಸಿದರು. ತಂದೆ ಮಾಣಿಪ್ಪಾಡಿ ಕೇಶವ ಭಟ್ಟ, ತಾಯಿ ಕನಕಲಕ್ಷ್ಮಿ. ಪ್ರಸ್ತುತ ವಿಟ್ಲದಲ್ಲಿ ವಾಸವಾಗಿದ್ದಾರೆ. ನಾಡಿನ ಸುಪ್ರಸಿದ್ಧ ಅರ್ಥಧಾರಿ ಕಲಾವಿದರಾಗಿರುವ ರಾಧಾಕೃಷ್ಣ ಕಲ್ಚಾರರು ಉಪನ್ಯಾಸಕ, ಅಂಕಣಕಾರ, ಸಾಹಿತಿ,ವಿಮರ್ಶಕ ,ಭಾಷಣಕಾರ,ಹೀಗೆ ಹತ್ತು ಹಲವು ರಂಗಗಳಲ್ಲಿ ತೊಡಗಿಸಿಕೊಂಡ ಬಿಡುವಿಲ್ಲದ ಸಾಧಕ. ಕೂಡುಮನೆ (ಕಾದಂಬರಿ), ಅವರವರ ದಾರಿ (ಕಥಾಸಂಕಲನ) , ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ - ಇವರ ಕೃತಿಗಳು. ಜೊತೆಗೆ ತರಂಗ,ಉತ್ಥಾನಗಳಲ್ಲಿ ಅಂಕಣಕಾರಾಗಿದ್ದಾರೆ. ಸದ್ಯ ಹೊಸದಿಗಂತ ಪತ್ರಿಕೆಯಲ್ಲಿ ಆ ಲೋಚನ ಹಾಗೂ ತುಷಾರ ಪತ್ರಿಕೆಯಲ್ಲಿ ಉಲಿಯ ಉಯ್ಯಾಲೆ ಅಂಕಣದ ಲೇಖರಾಗಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದ ...
READ MORE