ಅದಮಾರು ಶ್ರೀಪತಿ ಆಚಾರ್ಯ ಅವರ ಈ ಕಥಾಸಂಕಲನ ಬಾಗಲೋಡಿ ಅಥವಾ ನಿಂಜೂರರ ಕಥಾಶೈಲಿಯನ್ನು ನೆನಪಿಸಿದರೂ ಸಣ್ಣ ಕಥೆಗಳು ಐವತ್ತು ಅರವತ್ತು ವರ್ಷಗಳ ಹಿಂದಿನ ವಿದ್ಯಮಾನದ ಕಥೆಗಳನ್ನೂ ಹೇಳಿದರೂ ಅತ್ಯುತ್ಕೃಷ್ಟ ಕಥೆಗಳ ಸಾಲಿಗೆ ಸೇರುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ.ಆಚಾರ್ಯರು ತಮ್ಮ 81ನೆ ವರ್ಷ ಪ್ರಾಯದಲ್ಲಿ ಇಷ್ಟೊಂದು ಅತ್ಯುತ್ತಮ ಕಥೆಗಳನ್ನು ಬರೆದಿದ್ದಾರೆ ಎನ್ನುವುದೆ ಒಂದು ವಿಸ್ಮಯ. ಒಟ್ಟೂ ಏಳು ಕಥೆಗಳಿವೆ ಏಳು ಕಥೆಗಳು ಉಡುಪಿ ಜಿಲ್ಲೆಯಲ್ಲಿ ಸುಮಾರು ಅರ್ಧಶತಮಾನಕ್ಕಿಂತಲೂ ಹಿಂದೆ ನಡೆದ ಘಟನೆಗಳ ನಿರೂಪಣೆಯಲ್ಲಿ ಅಂದಿನ ಪರ್ಯಾಯ, ದೀಪೋತ್ಸವಗಳನ್ನೊಳಗೊಂಡ ವಿಡಂಬನಾತ್ಮಕ ಕಥೆಗಳಿವೆ.
ಎಡಪಂಥೀಯ ಕಾರ್ಮಿಕ ಸಂಘಟನೆ ಮತ್ತು ಎಡಪಂಥೀಯ ರಾಜಕೀಯ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅದಮಾರು ಶ್ರೀಪತಿ ಆಚಾರ್ಯ ಅವರು ಮೂಲತಃ ಉಡುಪಿಯವರು. ಮೂರು ದಶಕಗಳಿಗೂ ಹೆಚ್ಚು ಕಾಲ LIC ಉಡುಪಿ ಮತ್ತು ಬೆಂಗಳೂರು ವಿಭಾಗಗಳಲ್ಲಿಅಲ್ಲಿನ ಕಾರ್ಮಿಕ ಸಂಘಟನೆಯಾದ ಅಖಿಲ ಭಾರತ ವಿಮಾ ನೌಕರರ ಸಂಘದಲ್ಲಿ ವಿಭಾಗೀಯ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದಾರೆ. 1943ರ ಮಾರ್ಚ್ 15ರಂದು ಜನಿಸಿದ ಆಚಾರ್ಯರು ಇಂಗ್ಲಿಷ್ ಎಂ.ಎ ಪದವೀಧರರು. ಭಾರತೀಯ ಜೀವ ವಿಮಾ ನಿಗಮದಲ್ಲಿ ಮೂವತ್ತೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ’ಜನವಾಹಿನಿ’ ದೈನಿಕದಲ್ಲಿ ...
READ MORE