ಖ್ಯಾತ ಲೇಖಕ ಎಂ.ವ್ಯಾಸ ಅವರ ‘ಓಟ’ ಕೃತಿಯು ಕಥಾ ಸಂಕಲನವಾಗಿದೆ. ಮಾನವ ಬದುಕಿನ ವಿಷಾದ ಭಾವವನ್ನೇ ಕಥಾವಸ್ತುವಾಗಿಸಿಕೊಂಡು ಬರೆದಿರುವ 13 ಕಥೆಗಳು ಈ ಸಂಕಲನದಲ್ಲಿವೆ. ವರದರಾಜ ಚಂದ್ರಗಿರಿಯವರು ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ. ‘ಕನ್ನಡದ ಅಪೂರ್ವ ಕತೆಗಾರರೆಂದೇ ಗುರುತಿಸಲ್ಪಟ್ಟ ಎಂ.ವ್ಯಾಸ ಅವರ ಅಸಂಕಲಿತ ಕತೆಗಳನ್ನು ಹುಡುಕಿ ತೆಗೆದು ಸಂಕಲನ ರೂಪದಲ್ಲಿ ಪ್ರಕಟಿಸುವ ನಮ್ಮ ಯೋಜನೆಯಲ್ಲೀಗ ಮತ್ತೊಂದು ಸಂಕಲನ ಸೇರ್ಪಡೆಗೊಂಡಿದೆ. ‘ಓಟ’ ಸಂಕಲನವು, ವ್ಯಾಸರು 1966-73ರ ಅವಧಿಯಲ್ಲಿ ಬರೆದ ಹದಿಮೂರು ಕಥೆಗಳ ಸಂಕಲನ’ ಎಂದಿದ್ದಾರೆ.
ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ್ತು ’ಸ್ನಾನ’ ಎಂಬ ಮೂರು ಕಿರು ಕಾದಂಬರಿಗಳ ಸಂಕಲನವನ್ನೂ ಪ್ರಕಟಿಸಿದ್ದರು. 'ಅಜಂತಾ’ ಎಂಬ ಮಾಸಪತ್ರಿಕೆಯನ್ನು ಒಂದು ...
READ MORE