‘ಒಂದು ಇಡಿಯ ಬಳಪ’ 2021ನೇ ಸಾಲಿನ ಮೈತ್ರಿ ಪುಸ್ತಕ ಪ್ರಕಾಶನದ ಕಥಾಸ್ಪರ್ಧೆಯಲ್ಲಿ ಆಯ್ಕೆಗೊಂಡು ಪ್ರಕಟವಾದ ಸುಧಾ ಆಡುಕಳ ಅವರ ಕೃತಿ. ಸ್ಫರ್ಧೆಯ ತೀರ್ಪುಗಾರ್ತಿ ಲೇಖಕಿ ಎಲ್.ಸಿ. ಸುಮಿತ್ರಾ ಅವರು ಕೃತಿಯ ಕುರಿತು ‘ಒಂದು ಇಡಿಯ ಬಳಪ ಕೃತಿಯಲ್ಲಿನ ಕತೆಗಳು, ವಸ್ತು, ಭಾಷೆ ಹಾಗೂ ನಿರೂಪಣೆಯ ದೃಷ್ಟಿಯಿಂದ ಹೆಚ್ಚು ತೀವ್ರವಾಗಿದೆ. ಸೃಜನಶೀಲತೆಯಿಂದ ಕೂಡಿದ ಅಭಿವ್ಯಕ್ತಿಗಳನ್ನು ಹೊಂದಿದ ಈ ಕತೆಗಳು ಸುಲಭವಾಗಿ ಓದಿಸಿಕೊಳ್ಳುತ್ತವೆ. ಸುಮಿತ್ರ. ಹಾಗೇ ಶೀರ್ಷಿಕೆಯ ಕತೆ ಒಂದು ಇಡಿಯ ಬಳಪ ಹೆಣ್ಣಿನ ಬದುಕಿಗೆ ಒಂದು ರೂಪಕವಾಗಿದೆ. ಕತೆಯ ನಿರೂಪಕಿಗೆ ಒಂದು ಇಡಿಯ ಬಳಪ ಬಾಲ್ಯದಲ್ಲಿ ಸಿಗುವುದಿಲ್ಲ. ಸಿಕ್ಕರೂ ದಕ್ಕಿಸಿಕೊಳ್ಳಲು ಕಷ್ಟವಾದ ಸನ್ನಿವೇಶ, ಈ ಕತೆಯ ದೇವಿ ಹಾಗೂ ಸ್ವತಃ ನಿರೂಪಕಿ ನಾರಿ ಜಗತ್ತಿನ ಕಷ್ಟ ನಿಷ್ಠುರಗಳಿಗೆ ಪ್ರತೀಕವಾಗಿದ್ದಾರೆ ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಂದು ಇಡಿಯ ಬಳಪ, ಪಾರಿಜಾತ, ಗೆಳತಿ ಭಾನುಮತಿ, ಹೊಳೆ, ಮೊಳಕೆ, ನೀಲಿಯ ಜಗತ್ತು, ಸತ್ಯದ ಬದುಕು, ದೇವೀರಮ್ಮ, ಶಿಖಂಡಿಯ ಸ್ವಗತ, ಅಕ್ರಮ-ಸಕ್ರಮ, ಕಥೆಯನ್ನರಸುತ್ತಾ ಸೇರಿದಂತೆ 10 ಕಥೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
ಸುಧಾ ಆಡುಕಳ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳ ಗ್ರಾಮದವರಾದ ಶ್ರೀಮತಿ ಸುಧಾ ಆಡುಕಳ ಅವರು ಪ್ರಸ್ತುತ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಧಾ, ನೃತ್ಯಗಾಥಾ, ಆನಂದಭಾವಿನಿ, ಮಾಧವಿ ಮೊದಲಾದ ಏಕವ್ಯಕ್ತಿ ನಾಟಕಗಳನ್ನು, ಮಕ್ಕಳ ರವೀಂದ್ರ, ಕನಕ-ಕೃಷ್ಣ, ಮಕ್ಕಳ ರಾಮಾಯಣ, ಬ್ರಹ್ಮರಾಕ್ಷಸ ಮತ್ತು ಕಥೆ, ಮರ ಮತ್ತು ಮನುಷ್ಯ ಮೊದಲಾದ ಮಕ್ಕಳ ನಾಟಕಗಳನ್ನು ರಚಿಸಿರುತ್ತಾರೆ. ರವೀಂದ್ರನಾಥ ಟ್ಯಾಗೋರರ ಕೆಂಪು ಕಣಗಿಲೆ, ಚಿತ್ರಾ ಮತ್ತು ಅವಳ ಕಾಗದ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಇವರ ‘ಬಕುಲದ ಬಾಗಿಲಿನಿಂದ’ ಕೃತಿಗೆ ರಾಜ್ಯಸಾಹಿತ್ಯ ಅಕಾಡೆಮಿ ಬಹುಮಾನ ...
READ MORE