'ಒಲವು ತುಂಬುವುದಿಲ್ಲ’ ಗೋಪಾಲಕೃಷ್ಣ ಕುಂಟಿನಿ, ಜೋಗಿ ಸಂಪಾದನೆಯ ಕಥಾಸಂಕಲನಗಳ ಸಂಗ್ರಹವಾಗಿದೆ. ಕಥೆಕೂಟದ ಸದಸ್ಯರ ಪೈಕಿ ಮೂವತ್ತು ಕತೆಗಾರರು ಬರೆದ ಮೂವತ್ತು ಕಥೆಗಳು ಈ ಸಂಕಲನದಲ್ಲಿವೆ. ಈ ಕತೆಗಳ ವೈವಿಧ್ಯ ಮತ್ತು ವಿಸ್ತಾರ ಕಥಾಜಗತ್ತಿನ ಸಾಧ್ಯತೆಯನ್ನೂ ತೋರುವಂತಿವೆ. ಇಲ್ಲಿ ಅತ್ಯುತ್ತಮ ಕತೆಗಳಿವೆ. ಅತ್ಯುತ್ತಮವಾಗಲು ಹಂಬಲಿಸುವ ಕತೆಗಳಿವೆ, ಸಾಮಾನ್ಯವಾದ ಕತೆಗಳೂ ಇವೆ. ಆದರೆ ಎಲ್ಲ ಕತೆಗಳೂ ಹೊಸತನದಿಂದ ನಳನಳಿಸುತ್ತಿವೆ. ಕಥಾದಿಗಂತದ ಮೇರೆಯನ್ನು ದಾಟಲು ಹವಣಿಸುವಂಥ ಅನೇಕ ಕತೆಗಳನ್ನೂ ನಾನಿಲ್ಲಿ ಹೆಸರಿಸಬಲ್ಲೆ. ಆ ಕಾರಣಕ್ಕೇ ಇದು ಅತ್ಯಂತ ಮಹತ್ವದ ಸಂಕಲನ. ಇಲ್ಲಿ ಎಲ್ಲಾ ಪ್ರದೇಶಕ್ಕೆ ಸೇರಿದ, ಹೊರನಾಡಿನ, ವಿವಿಧ ಹಿನ್ನೆಲೆಯ ಕತೆಗಾರರು ಸಂಗಮಿಸಿದ್ದಾರೆ.