ಚಿತ್ತಾಲರ ಕತೆಗಳ ಒಂಬತ್ತನೆಯ ಸಂಕಲನ ’ಓಡಿ ಹೋದಾ ಮುಟ್ಟಿ ಬಂದಾ’ (2001). ಈ ಸಂಕಲನದ ಕತೆಗಳ ಬಗ್ಗೆ ಮತ್ತೊಬ್ಬ ಕತೆಗಾರ ರಾಘವೇಂದ್ರ ಪಾಟೀಲರ ಅಭಿಪ್ರಾಯ ಹೀಗಿದೆ-
ಚಿತ್ತಾಲರ ಈ ಹೊಸ ಸಂಕಲನದ ಕತೆಗಳು, ಅವರ ಹಿಂದಿನ ಕತೆಗಳಂತೆ ನಮ್ಮನ್ನು ತಳಮಳಕ್ಕೆ ಈಡು ಮಾಡಲಾರವು ಎನ್ನುವುದಿಲ್ಲ. ನಾನು-ಈಡು ಮಾಡುವುದಿಲ್ಲ ಅಂದರೆ ಈ ಕತೆಗಳು ಆ ಹಳೆಯ ಕತೆಗಳ ರೀತಿಗೆ ಭಿನ್ನವಾಗಿ, ತಳಮಳಕ್ಕೆ ಈಡುಮಾಡುವ ಮಾರ್ಗವನ್ನು ಬಿಟ್ಟುಕೊಡುವುದನ್ನು ಆಯ್ಕೆ ಮಾಡಿಕೊಂಡಿವೆ. ಚಿತ್ತಾಲರ ಆ ಕತೆಗಳು ಹರೆಯದ ಹುಳಿಯನ್ನು ಒಸರುವ ರೀತಿಯಾದರೆ, ಇಲ್ಲಿನ ಕತೆಗಳನ್ನು ವಯಸ್ಸಾಗಿ ನಡೆದ ಮಾಗುವಿಕೆ, ವಯಸ್ಸಾಗಿ ಬರುವ ಮುಪ್ಪು ಅಲ್ಲ- ವಯಸ್ಸಾಗಿ ಬರುವ ಪಕ್ವತೆ ಇಲ್ಲಿನ ಕತೆಗಳಲ್ಲಿ ಅಂತರ್ಗತವಾಗುವ ಮೂಲಸ್ರೋತವಾಗಿದೆ. ಇಡೀ ಸಂಕಲನದ ಎಲ್ಲ ಕತೆಗಳು ಜೀವನದ ಪಕ್ವತೆಯನ್ನು ಗ್ರಹಿಕೆಯನ್ನು ಪ್ರತಿಬಿಂಬಿಸುವ ಭಾವಬಿಂದುಗಳಾಗಿವೆ.
ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ. ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ...
READ MORE