ವಿಷಯ ಯಾವುದೇ ಆಗಿರಲಿ ಅತಿ ರಂಜಕತೆ, ದಿಢೀರ್ ಪರಿಹಾರ, ಜಡ್ಜ್ಮೆಂಟಲ್ ಮತ್ತು ಕಪ್ಪು-ಬಿಳುಪಾದ ಪ್ರತಿಕ್ರಿಯೆಗಳಿಲ್ಲದೆ ಸೂಕ್ಷ್ಮವಾಗಿ ಗಮನಿಸುವ, ವಿವೇಕದಲ್ಲಿ ತೂಗಿ ನೋಡುವ ಪ್ರಬುದ್ಧತೆ ಇವರ ಕತೆಗಳಲ್ಲಿ ಗಮನಾರ್ಹವಾದುದು. ಇದರಲ್ಲಿ ಹನ್ನೆರಡು ಸಣ್ಣಕಥೆಗಳಿವೆ. ವ್ಯಕ್ತಿ, ಕುಟುಂಬ, ಸಮುದಾಯಗಳ ದೃಷ್ಟಿಕೋನಗಳು, ಸಂಬಂಧಗಳು, ಅವುಗಳ ಬೆಳವಣಿಗೆಗಳು ಕಥಾ ಹಂದರಗಳಲ್ಲಿ ಬೆಸದುಕೊಂಡಿವೆ. ಈ ಸೂಕ್ಷ್ಮವಾದ ಹೆಣಿಗೆಯೇ ಕಥೆಗಳಲ್ಲಿ ನಮ್ಮ ಆಸಕ್ತಿಯನ್ನು ಪ್ರಬಲಗೊಳಿಸುವ ಪ್ರಮುಖ ಅಂಶವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿಯಾಗಿರುವ ಪೆರ್ನೆಯ ಅಬ್ದುಲ್ ರಶೀದ್ ಮತ್ತು ಆಯಿಶಾ ದಂಪತಿಯ ಮಗಳು. ಕಲ್ಲಡ್ಕ, ಪೆರ್ನೆ, ಉಪ್ಪಿನಂಗಡಿ, ಪುತ್ತೂರು ಗಳಲ್ಲಿ ವಿದ್ಯಾಭ್ಯಾಸ. ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವೀಧರೆ. ಗೃಹಿಣಿ. 2020ರಲ್ಲಿ ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2021ರಲ್ಲಿ ಮೊಗವೀರ ಸಾಹಿತ್ಯ ಪ್ರಶಸ್ತಿ, 2022ರಲ್ಲಿ ಸಮಾಜಮುಖಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಅಪ್ರಕಟಿತ ಕವನ ಸಂಕಲನಕ್ಕಾಗಿ ವಿದ್ಯಾಧರ ಪ್ರತಿಷ್ಠಾನ ಕೊಡಮಾಡುವ ದ.ರಾ. ಬೇಂದ್ರೆ ಸಾಹಿತ್ಯ ಪ್ರಶಸ್ತಿ ದೊರಕಿದೆ. ಇವರ 'ಕಡಲು ನೋಡಲು ಹೋದವಳು' ಕೃತಿಗೆ ಲಂಕೇಶ್ ಪ್ರಶಸ್ತಿ ಮತ್ತು ಅವ್ವ ಪ್ರಶಸ್ತಿ 2023ರಲ್ಲಿ ದೊರಕಿದೆ. 2023ರಲ್ಲಿ ...
READ MORE