‘ನಿರ್ವಾಣ’ ಕವಿ, ಲೇಖಕ ಕುಮಾರ ಬೇಂದ್ರೆಯವರ ಮೂರನೆಯ ಕಥಾ ಸಂಕಲನ. ಈ ಕೃತಿ 'ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ' ಹಸ್ತಪ್ರತಿಗಳ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದಿದೆ. ಕವಿಯಾಗಿ, ಕಾದಂಬರಿಕಾರರಾಗಿ ಸಾಹಿತ್ಯ ಲೋಕದಲ್ಲಿ ಈಗಾಗಲೇ ಪರಿಚಿತರಾಗಿರುವ ಕುಮಾರ ಬೇಂದ್ರೆ ತಮ್ಮ ಹಲವು ಬರಹ, ಪುಸ್ತಿಕೆಗಳಿಗೆ ಬಹುಮಾನ ಪಡೆದವರು. ತಾವು ಓದಿದ್ದು ಬೇರೆಯಾದರೂ, ದುಡಿಯುತ್ತಿರುವ ವೃತ್ತಿ ಪೂರಕವಲ್ಲದಿದ್ದರೂ ಈ ಎಲ್ಲ ನಕಾರಾತ್ಮಕ ಅಂಶಗಳನ್ನು ಒಂದು ಗುಣಾತ್ಮಕ ಅಂಶಗಳನ್ನಾಗಿ ಪರಿವರ್ತಿಸಿಕೊಳ್ಳುವ ಕಲೆಗಾರಿಕೆ ಮತ್ತು ನೈಪುಣ್ಯತೆ ಅವರಲ್ಲಿದೆ. ಮಣ್ಣನ್ನು ಚಿನ್ನವಾಗಿ ಪರಿವರ್ತಿಸಬಲ್ಲ ಮಾಂತ್ರಿಕಗುಣ ಕಲೆಯಲ್ಲಿ ಮಾತ್ರ ಸಾಧ್ಯವೇನೋ!. ಹಾಗಾಗಿ ಕುಮಾರ ಬೇಂದ್ರೆ ಮತ್ತೆ ಮತ್ತೆ ಅಕ್ಷರಗಳನ್ನು ಆರ್ತವಾಗಿ ಬೇಡಿಕೊಳ್ಳುತ್ತಾರೆ.
ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...
READ MORE