ನಿಲುಗನ್ನಡಿ

Author : ರೇಣುಕಾ ಕೋಡಗುಂಟಿ

Pages 128

₹ 120.00




Year of Publication: 2021
Published by: ಬಂಡಾರ ಪ್ರಕಾಶನ
Address: ಮಸ್ಕಿ

Synopsys

‘ನಿಲುಗನ್ನಡಿ’ ಲೇಖಕಿ ರೇಣುಕಾ ಕೊಡಗುಂಟಿ ಅವರ ಮೊದಲ ಕತಾ ಸಂಕಲನ. ಇಲ್ಲಿ 12 ಕತೆಗಳು ಸಂಕಲನಗೊಂಡಿವೆ. ಈ ಕೃತಿಗೆ ಕುಂ.ವೀರಭದ್ರಪ್ಪ(ಕುಂವೀ), ಪ್ರೊ. ಕಾಳೇಗೌಡ ನಾಗವಾರ, ಸಂಧ್ಯಾ ಹೊನಗುಂಟಿಕರ್ ಅವರ ಬೆನ್ನುಡಿ ಬರಹಗಳಿವೆ. ಕತೆಗಳ ಕುರಿತು ಬರೆಯುತ್ತಾ ‘ಬಳಪದ ಚೂರು’ ಹೆಸರಿನ ಕವನ ಸಂಕಲನ ಪ್ರಕಟಿಸಿರುವ ರೇಣುಕಾ ಕೋಡಗುಂಟಿ ಜನಪದ ಹಾಡುಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕರ್ನಾಟಕದಲ್ಲಿ ಶವಸಂಸ್ಕಾರ ಎಂಬ ಇವರ ಸಂಪಾದಿತ ಕೃತೀನ ಎಲ್ಲರು ಓದಲೇಬೇಕು. ಇವೊಂದೆ ಅಲ್ಲದೆ ಇನ್ನು ಹಲವು ಕೃತಿಗಳನ್ನು ರಚಿಸಿದ್ದಾರೆ, ಸಂಪಾದಿಸಿದ್ದಾರೆ, ಜಾನಪದರೊಡನೆ ಆತ್ಮೀಯವಾಗಿ ಒಡನಾಡಿದ್ದಾರೆ. ಸಾಹಿತ್ಯ ಸಂಸ್ಕೃತಿ ಸಂಬಂಧೀ ಸೆಮಿನಾರುಗಳಲ್ಲಿ ಭಾಗವಹಿಸಿದ್ದಾರೆ, ತನ್ಮೂಲಕ ಅಕಾಡೆಮಿಕ್ ವಲಯದಲ್ಲಿ ಹೆಸರಾಗಿದ್ದಾರೆ. ಗೃಹಕೃತ್ಯಗಳ ನಡುವೆಯೂ ಈ ಕ್ರಿಯಾಶೀಲ ಮಹಿಳೆ ಹಲವು ಕಥೆಗಳನ್ನು ಸಾಂದರ್ಭಿಕವಾಗಿ ರಚಿಸಿರುವುದು ಗಮನಾರ್ಹ ಮತ್ತು ಸ್ವಾಗತಾರ್ಹ. ಓರಲ್ ಟ್ರೆಡಿಷನ್ ಯುಗದಲ್ಲಿ ಮಹಿಳೆ ಕಥೆಗಳ ವಾರಸುದಾರಳು ಮತ್ತು ಮಹಾ ಪೋಷಕಳು, ಈ ಕಾರಣದಿಂದ ರೇಣುಕಾ ಇಲ್ಲಿನ ಕಥೆಗಳನ್ನು ಬರೆದಿರುವರು ಎನ್ನುವುದು ಮುಖ್ಯವೆ ಹೊರತು ಹೇಗೆ ಎಂತಾಂತ ಅಲ್ಲ. ಇಲ್ಲಿನ ಹನ್ನೆರಡೂ ಕಥೆಗಳು ಮಸ್ಕಿ ತೊಟ್ಟಿಲಲ್ಲಿ ಬೆಳೆದವುಗಳೆ. ಇವು ಇಲ್ಲಿನ ನೆಲಮೂಲ ನಂಬಿಕೆಗಳಿಗೆ ಸಂಬಂಧಿಸಿದವುಗಳೆ. ಈ ಕಥೆಗಳ ಕನ್ನಡಿಯಲ್ಲಿ ಗ್ರಾಮೀಣ ಧೀರೋದಾತ್ತ ಮಹಿಳೆಯ ಹಲವು ಮುಖಗಳ ಪ್ರತಿಬಿಂಬಗಳಿವೆ. ಜಾಗತೀಕರಣದ ದಾಂಧಲೆಯಿಂದ ಬದಲಾದ ಹಳ್ಳಿಗಳ ಚೆಹರೆಯನ್ನು ಪ್ರಶ್ನಿಸುವ ಕಥೆಗಳೆ. ಮಸ್ಕಿ ಪರಿಸರದ ಪ್ರಾದೇಶಿಕ ಭಾಷೆಯ ನೇಯ್ಗೆಯಲ್ಲಿರುವ ಈ ಕಥೆಗಳು ಸಲೀಸಾಗಿ ಓದಿಸಿಕೊಳ್ಳುತ್ತವೆ ಎಂದಿದ್ದಾರೆ ಕುಂವೀ, ಜೊತೆಗೆ ರೇಣುಕಾ ಅವರಿಗೆ ಗ್ರಾಮೀಣ ಪ್ರದೇಶದ ಬಗೆಗಿನ ಕಾಳಜಿಯನ್ನು ಇಲ್ಲಿನ ಪ್ರತಿ ಕಥೆಗಳು ಧ್ವನಿಸುತ್ತವೆ. ರೇಣುಕಾ ಅಪ್ಪಟ ಕಥೆಗಾರ್ತಿ ಎನ್ನುವುದಕ್ಕೆ ಪುರಾವೆ ಈ ಸಂಕಲನ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

About the Author

ರೇಣುಕಾ ಕೋಡಗುಂಟಿ

ರೇಣುಕಾ ಕೋಡಗುಂಟಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಅಯ್ಯಪ್ಪ ಕೋಡಗುಂಟಿ, ತಾಯಿ ಶಾಂತಮ್ಮ ಕೋಡಗುಂಟಿ, ರೇಣುಕಾ ಕೋಡಗುಂಟಿಯವರು ವಿದ್ಯಾಭ್ಯಾಸ ಎಂ.ಎ, ಎಂ.ಫಿಲ್, ಗೃಹಿಣಿ. ಸಾಹಿತ್ಯ, ಸಂಶೋಧನೆಯಲ್ಲಿ ಅಪಾರ ಆಸಕ್ತಿ. ‘ಕೃತಿ ದೀವಿಗೆ ಟ್ರಸ್ಟ್, ನಡೆಸುತ್ತಿದ್ದಾರೆ. ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಕೆಲಸ ಮಾಡುತ್ತಿದ್ದಾರೆ. ಕೃತಿಗಳು: ಬಳಪದ ಚೂರು(ಕವನ ಸಂಕಲನ-2011), ‘ನಮ್ಮ ಕನ್ನಾಡ ಪ್ರೇಮದ ಜೋತಿ (2011-ರಾಯಚೂರು ಜಿಲ್ಲೆಯ ಕಸಬಾ ಲಿಂಗಸೂಗೂರಿನ ಅಂಪವ್ವ ಪೂಜಾರಿ ಅವರು ಹಾಡಿರುವ ಜನಪದ ಹಾಡುಗಳ ಸಂಗ್ರಹ), ಅದೇ ಗಾಯಕರು ಹಾಡಿರುವ ‘ಇಜಬೂಪನ ಪದ’ (2019- ಎನ್ನುವ ಜನಪದ ಖಂಡಕಾವ್ಯ),  ‘ಭಾಷಾವಿಜ್ಞಾನ ಸಂಶೋಧನೆ ಇಂದು’ (ಸಂಶೋಧನಾ ಪ್ರಬಂಧಗಳ ಸಂಪಾದನೆ-2011), ಕರ್ನಾಟಕದಲ್ಲಿ ಶವಸಂಸ್ಕಾರ (ಸಂಶೋಧನಾತ್ಮಕ ...

READ MORE

Related Books