ನೆಲದ ಮರೆಯ ನಿಧಾನ, ಕಥಾಸಂಕಲನವು ಇಡೀ ಹೈದ್ರಾಬಾದ ಕರ್ನಾಟಕದ ಭಾಷೆ. ಜನರ ಬದುಕು, ಬಡತನ, ಕ್ರೌರ್ಯ, ಬಿಸಿಲು, ಮನಸ್ಸು, ಪ್ರೇಮ ಮತ್ತು ಕಾಮವನ್ನು ಸೃಜನಶಿಲ ಕಥೆಯಾಗಿಸಿದ ಸಿದ್ಧರಾಮ ಹೊನ್ಕಲ್ ಅಪರೂಪದ ಕಥೆಗಾರ. ಈ ಕಥಾ ಸಂಕಲನದಲ್ಲಿ ಬಹುಮುಖ್ಯವಾಗಿ ಆರು ಕಥೆಗಳು ಸೇರಿದಂತೆ ಇದರಲ್ಲಿ ಇಪ್ಪತ್ತೈದು ಕಥೆಗಳಿವೆ. . ನೆಲದ ಮರೆಯ ನಿಧಾನಿವರ ಕಾಲು ಶತಮಾನದ ಕಥೆಗಳ ಸಂಗ್ರಹವಾಗಿದ್ದು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಹಾಗೂ ಸಸತವಾಗಿ ಆರು ಬಾರಿ ಪ್ರಶಸ್ತ ಪಡೆದುಕೊಂಡಿದೆ.
ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು. ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು. ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...
READ MORE