ಪ್ರಸನ್ನ ವಿ ಚೆಕ್ಕೆಮನೆ ಅವರ ‘ನೀಲಾಂಬರಿ’ ಕಥಾಸಂಕಲವಾಗಿದೆ. ಈ ಕಥಾ ಸಂಕಲನಕ್ಕೆ ವಿ.ಬಿ.ಕುಳಮರ್ವ ಅವರು ಮುನ್ನುಡಿ ಬರೆದಿದ್ದಾರೆ. ‘ಕಥೆಯೆಂದರೆ ಸಾಮಾನ್ಯವಾದುದಲ್ಲ. ಅದು ಸಾಹಿತ್ಯದ ಸಾಗರದ ಒಂದು ಅಣಿಮುತ್ತು. ಅದರಲ್ಲಿ ಅಗಾಧವಾದ, ಅಮೂಲ್ಯವಾದ ಜೀವನಾನುಭವಗಳು ಮಿಳಿತಗೊಂಡಿರುತ್ತವೆ. ಜೀವನಾನುಭವಗಳೇ ಕಥೆಗಳ ಜೀವಾಳವಾಗಿದ್ದರೆ, ಆ ಕಥೆ ಸರಾಗವಾಗಿ ಓದಿಸಿಕೊಂಡು ಹೋಗಿ ಓದುಗನ ಕುತೂಹಲವನ್ನು ತಣಿಸಿ ಆತನ ಹೃನ್ಮನಗಳನ್ನು ಮುದಗೊಳಿಸುತ್ತವೆ. ಪ್ರಕೃತ ‘ನೀಲಾಂಬರಿ’ ಎಂಬ ಕಥಾಸಂಕಲನವು ಈ ಗುಂಪಿಗೆ ಸೇರುತ್ತದೆ ಎಂಬುದಾಗಿ ವಿ.ಬಿ.ಕುಳಮರ್ವ ಹೇಳಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ಅಪೂರ್ವ, ಆಪ್ತಮಿತ್ರ, ಎಂದೆಂದೂ ನನ್ನವಳು, ಕರಗಿದ ಕಾರ್ಮೋಡ, ಕೈ ಬಳೆಗಳ ಇಂಚರ, ಗೃಹ ತಪಸ್ವಿನಿ, ನಂದಾದೀಪ, ನೀನಿಲ್ಲವಾದರೆ ನಾ.., ನೀನೇ ನನ್ನ ಚೇತನ, ನೀಲಾಂಬರಿ, ಪರದೆಯ ಹಿಂದೆ, ಬೆಳದಿಂಗಳ ಸೀರೆಯನು ಉಡಿಸಿದನಂದು ನಲ್ಲನು ಒಲವಿನಲಿ, ಭಾವಗಳ ಅನುಕಂಪ, ಮಕುಟದ ರತ್ನ, ಮತ್ತೊಂದು ಸೂರ್ಯೋದಯ, ಮುಂಜಾನೆಯ ರಂಗು, ಶರದಿಂದುಲೇಖೆ, ಸಮಯವೆಂಬ ಸರಿತೆ, ಸಾಕ್ಷಾತ್ಕಾರ, ಸ್ವಾಗತ, ಹುಟ್ಟುಹಬ್ಬ, ಹೊನ್ನಿನಂಥ ಹಲಸು-ಚಿನ್ನದಂತ ಮನಸು, ಹೂವು ಹಾಸಿದ ಹಾದಿ, ಒಪ್ಪಿಗೆ ..ಹೀಗೆ 24 ಶೀರ್ಷಿಕೆಗಳುಳ್ಳ ಕಥೆಗಳು ಈ ಕಥಾಸಂಕಲನದಲ್ಲಿದೆ.
ಕಾಸರಗೋಡಿನ ಬಾಡೂರು ಗ್ರಾಮದ ಪಳ್ಳದಲ್ಲಿರುವ ಸರ್ಪಂಗಳ ಹರಿಯಪ್ಪ ಭಟ್ ಹಾಗೂ ರಮಾ ಎಚ್. ಭಟ್ ದಂಪತಿಯ ಪುತ್ರಿ ಪ್ರಸನ್ನಾ ವಿ ಚೆಕ್ಕೆಮನೆ 05-01-1979ರಂದು ಜನಿಸಿದರು. ಅವರು ಚೆಕ್ಕೆಮನೆ ವೆಂಕಟಕೃಷ್ಣ ಅವರ ಪತ್ನಿ. ಕನ್ನಡ, ಮಲೆಯಾಳಂ ಹಾಗೂ ಹವ್ಯಕ ಭಾಷೆಗಳಲ್ಲಿ ಕಥೆ, ಕವನ, ಭಾವಗೀತೆ, ಭಕ್ತಿಗೀತೆ, ಲೇಖನಗಳನ್ನು ಬರೆಯುತ್ತಿರುವ ಇವರ ಒಂದು ಹವ್ಯಕ ಕಾದಂಬರಿ ಸ್ವಯಂವರವು ಒಪ್ಪಣ್ಣ. ಕಾಂ ಎಂಬ ವೆಬ್ ಸೈಟ್ ನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ತುಳಸೀಹಾರ, ಗರಿಕೆಯಂಚಿನ ಹಿಮಬಿಂದು, ಸಿಂಧೂರ ರೇಖೆಯ ಮಿಂಚು, ನಿನಗಾಗಿ ತೆರೆದ ಬಾಗಿಲು, ಯಾವ ಕಾಣಿಕೆ ನೀಡಲಿ ನಿನಗೆ, ನನ್ನೆದೆಯು ಮಿಡಿಯುತಿದೆ ನಿನ್ನ ...
READ MORE