ನಾತಲೀಲೆ ಒಂದಷ್ಟು ಕತೆಗಳು

Author : ಎಸ್. ಸುರೇಂದ್ರನಾಥ್

₹ 25.00




Year of Publication: 2014
Published by: ಭಾವನಾ ಪ್ರಕಾಶನ
Address: ಪದ್ಮನಾಭನಗರ, ಬೆಂಗಳೂರು

Synopsys

`ನಾತಲೀಲೆ ಒಂದಷ್ಟು ಕತೆಗಳು’ ಕೃತಿಯು ಎಸ್. ಸುರೇಂದ್ರನಾಥ್ ಅವರ ಕತಾಸಂಕಲನವಾಗಿದೆ. ಕೃತಿಯ ಕುರಿತ ಕೆಲವೊಂದು ವಿಚಾರಗಳು ಹೀಗಿವೆ; ಎಸ್ ಸುರೇಂದ್ರನಾಥರ ಕಥಾಸಂಗ್ರಹ ನಾತಲೀಲೆಯಲ್ಲಿ ನಾವು ಕಾಣುವ ಕಪ್ಪು ಹೊಗೆಹಿಡಿದ ಮನೆಯೊಳಗಿನ ಗೂಡು ವೈದಿಕ ಕರ್ಮಠರಂತೆ ಭಾಸವಾಗುವ ಕುರುವಿನ ಗುಲಾಮ ಕತೆಯ ಸೀತಾರಾಮ ಶಾಸ್ತ್ರಿಗಳು, ನಾತಲೀಲೆಯ ಮಾರುತಿರಾವ್ ತುಕಾರಾಮ್ ಗಾಢವೇ ಅಲಿಯಾಸ್ ಹುರಗಡಲೀ ಮೇಷ್ಟ್ರು, ಮಾತು ಮಾತಿಂದ ಅವನ ಕೊಂದಿಹರು ಕತೆಯ ಶ್ರೀಪತಿ ತರಗುಂಡಿ, ಗುಪ್ತ ಸಮಾಲೋಚನ ಕತೆಯ ಮದನಪಲ್ಲಿ, ಭವಾನಿಶಂಕರ ಬೋಧರಾಯ ಸುಬ್ರಮಣ್ಯ ಶರ್ಮ ಮತ್ತು ಅವನ ಹೆಂಡತಿ ಅನುಸೂಯ, ಅಥವಾ ಅಶೋಕ ಹೆಗಡೆಯವರ ಕಥಾಸಂಕಲನ ಒಂದು ತಗಡಿನ ಚೂರು ಕೃತಿಯ ದೂರ ಸಮುದ್ರದ ಕಾಡು ಕತೆಯ ಉಮಾಪತಿ, ವೆಂಕಟಸುಬ್ಬಯ್ಯ ರಾಮೋಜಿ ಬಾಳಾ, ಪಿ.ಎಚ್.ಡಿ ಮತ್ತು ಗಡಿಯಾರ ಗೋಪುರದ ಇತಿಹಾಸವು ಕತೆಯ ವೆಂಕಟಸುಬ್ಬಯ್ಯ ಮುಂತಾದ ಪಾತ್ರಗಳನ್ನು ಇಲ್ಲಿ ಕಾಣಬಹುದು. ಇವರು ಅನುಸರಿಸುವ ಲಘು ವೈನೋದಿಕ ಧಾಟಿಯನ್ನು ಎಸ್. ದಿವಾಕರ್ ಪೂರ್ತಿಯಾಗಿ ಅನುಸರಿಸುವುದಿಲ್ಲವಾದರೂ ದಿವಾಕರರ ಕತೆಯ ನಿರೂಪಣೆ ಕೂಡ ವಿನೋದದ ಒಂದು ಎಳೆಯನ್ನು ಇರಿಸಿಕೊಂಡೇ ಸಾಗುತ್ತದೆ ಎಂಬುದು ಗಮನಾರ್ಹ. ಕೊನೆಯ ಎರಡು ಕತೆಗಳ ನಿರೂಪಕಿಯರಾದ ವಾರಿಜಾ ಮತ್ತು ವೈದೇಹಿಯರು ಕೂಡಾ ತಮ್ಮ ನಿರೂಪಣೆಯಲ್ಲಿನ ನವಿರು ಧಾಟಿಯಿಂದಲೇ ಇದನ್ನು ಸಾಧಿಸುತ್ತಾರೆ ಎಂಬುದು ನಿಜ. ಬಿಳಿಯ ಹೂಗಳ ಕವಿತೆ, ಕತೆ ಕೊಂಚ ಭಿನ್ನ ಧಾಟಿಯದು. ಇಲ್ಲಿನ ಪ್ರಧಾನ ಪಾತ್ರಗಳು ಮೂರು ದಂಪತಿಗಳನ್ನು ಅವರು ರಾಮಚಂದ್ರ ಮತ್ತು ಮಾಲಿನಿ, ತಿರುವೇಂಗಡಂ ಮತ್ತು ಸುಬ್ಬುಲಕ್ಷ್ಮಿ ಹಾಗೂ ಗೇಬ್ರಿಯಲ್ ಮತ್ತು ರೋಸಿ, ಇವರಲ್ಲದ ಜಗದಾಂಬಾಳ್ ಎನ್ನುವ ಒಂದು ಪಾತ್ರವೂ ಇದೆ’

About the Author

ಎಸ್. ಸುರೇಂದ್ರನಾಥ್

ಸುರೇಂದ್ರನಾಥ್ ಅವರು ಹುಟ್ಟಿದ್ದು ಮೂಡಬಿದರೆಯ ಸಮೀಪದ ಒಂದು ಹಳ್ಳಿಯಲ್ಲಿ. ಓದಿದ್ದು ಬೆಳೆದಿದ್ದು ದಾವಣಗೆರೆಯಲ್ಲಿ. ಓದಿನ ಸಮಯದಲ್ಲೇ ಸಾಹಿತ್ಯ, ನಾಟಕದ ಗೀಳು ಹತ್ತಿಸಿಕೊಂಡ ಅವರು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಾಟಕದ ತರಬೇತಿ ಪಡೆದರು. ಹೊಟ್ಟೆಪಾಡಿಗಾಗಿ ಒಂದಿಷ್ಟು ವರ್ಷಗಳು ಹಲವಾರು ಪತ್ರಿಕೆಗಳಲ್ಲಿ, ಜಾಹೀರಾತು ಕಂಪೆನಿಗಳಲ್ಲಿ ದುಡಿದಿದ್ದಾರೆ. ಬೆಂಗಳೂರಿನ ಸಂಕೇತ್ ತಂಡದಲ್ಲಿ ಸೇರಿ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಆನಂತರ ಈಟಿವಿ ಸಂಸ್ಥೆಯನ್ನು ಸೇರಿದ ಅವರು ಹದಿಮೂರು ವರ್ಷಗಳ ಕಾಲ ಹೈದರಾಬಾದಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ವೃತ್ತಿ, ರಂಗಭೂಮಿ ಒಡನಾಟಗಳೊಂದಿಗೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಸುರೇಂದ್ರನಾಥ್ ಎರಡು ಕಥಾಸಂಕಲನಗಳು - ಕಟ್ಟು ...

READ MORE

Related Books