ಕಥೆಗಾರ ಎಂ. ಎಸ್ ಶ್ರೀ ರಾಮ್ ಅವರ ’ನಾನು ನಾನೇ? ನಾನು, ನಾನೇ!’ ಕೃತಿಯು ಪ್ರಯೋಗಾತ್ಮಕವಾಗಿ ಸಣ್ಣ ಕತೆಗಳಾಗಿವೆ. ಇಲ್ಲಿರುವ ಕತೆಗಳು ವಸ್ತು, ಮನೋಧರ್ಮ ಮತ್ತು ನಿರೂಪಣಾ ತಂತ್ರಗಳ ನೆಲೆಯಲ್ಲಿ ಬೇರೆ ಬೇರೆ ಬಗೆಗಳಾಗಿವೆ. ಪ್ರಶ್ನೆಯಲ್ಲಿ ಮೊದಲಾಗಿ ಆಶ್ಚರ್ಯದಲ್ಲಿ ಕೊನೆಯಾಗುವ ಸಂಕಲನದ ಶೀರ್ಷಿಕೆಯು ’ಲೋಕಶೋಧನೆ’ ಮತ್ತು ’ ಆತ್ಮಶೋಧನೆ’ ಎರಡರಲ್ಲಿಯೂ ಖಚಿತವಾದ ತೀರ್ಮಾನಗಳಿಗೆ ಎಡೆಯಿಲ್ಲವೆಂಬ ಸತ್ಯವನ್ನು ಹೇಳುತ್ತವೆ. ಲೋಕವನ್ನು ಅರಿಯುವ ಪ್ರಾಮಾಣಿಕ ಪ್ರಯತ್ನವು ವ್ಯಕ್ತಿಯನ್ನು ಅಂದರೆ ಇಲ್ಲಿ ’ನನ್ನನ್ನು’ ಅರಿಯುವ ದಿಕ್ಕಿನಲ್ಲಿ ಚಲಿಸುತ್ತದೆ’ ಎಂದಿದ್ದಾರೆ ಲೇಖಕ ಶ್ರೀ ರಾಮ್.
ಕೃತಿಗೆ ಮುನ್ನುಡಿ ಬರೆದಿರುವ ಎಚ್.ಎಸ್ ರಾಘವೇಂದ್ರರಾವ್ ಅವರು, ಈ ಸಂಕಲನವನ್ನು ಪ್ರಯೋಗಾತ್ಮಕ ಎಂದು ಕರೆದಿರುವುದು ಸರಿಯಾಗಿದೆ. ತಮ್ಮ ಉದ್ದೇಶ ಸಾಧನೆಗಾಗಿ ಇಲ್ಲಿನ ಕತೆಗಳು ವಿವಿಧ ಸಲಕರಣೆಗಳನ್ನು ಬಳಸಿಕೊಂಡಿವೆ. ಅವೆಲ್ಲವೂ ಒಂದು ಬಗೆಯಿಂದ ವಾಸ್ತವ ನಿರೂಪಣೆಯಿಂದ ತಪ್ಪಿಸಿಕೊಳ್ಳುವ ಉಪಾಯಗಳಾಗಿವೆ. .ಶ್ರೀ ರಾಮ್ ಅವರು ಎರಡು ಬಗೆಯ ಕತೆಗಳನ್ನು ಬರೆದಿದ್ದಾರೆ. ಮೊದಲ ಕಾಲಘಟ್ಟದಲ್ಲಿ ಬರೆದ ಕತೆಗಳು ರಾಜಕೀಯದ ಫಲವಾದ ನೈತಿಕ ಅವನತಿಯನ್ನು ಕೇಂದ್ರವಾಗಿಟ್ಟುಕೊಂಡರೆ, ಎರಡನೇಯ ಹಂತದಲ್ಲಿ ನಿರ್ದಿಷ್ಟ ಬಗೆಯ ರಾಜಕಾರಣ ಮತ್ತು ಅಧಿಕಾರದ ದುರ್ಬಳಕೆಯ ಬಗ್ಗೆ ಇರುವ ಅಸಹನೆಯು ಇನ್ನಷ್ಟು ತೀವ್ರವಾಗಿ ವ್ಯಕ್ತವಾಗಿದೆ. ’ಬಸವನಹುಳು’, ’ಪ್ರಗತಿ’, ’ಈ ಊರಿನಲ್ಲಿ ಕಳ್ಳರೇ ಇಲ್ಲ’ ಮುತಾಂದವುಗಳು ಈ ಬಗೆಯ ಕತೆಗಳಾಗಿವೆ’ ಎಂದು ಪ್ರಶಂಸಿಸಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ (1962) ಎಂ.ಎಸ್. ಶ್ರೀರಾಮ್ ಅವರು ಶಿಕ್ಷಣ ಪಡೆದದ್ದು ಉಡುಪಿ, ಬೆಂಗಳೂರು, ಮೈಸೂರು ಮತ್ತು ಆನಂದ್ ದಲ್ಲಿ. ಹೈದರಾಬಾದ್ ನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದ ಅವರು ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಂದ ಡಾಕ್ಟರೇಟ್ ಪಡೆದರು. ಆಮೇಲೆ ಆನಂದದ ಇನ್ಸ್ ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟ್ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದ್ ನ ಬೇಸಿಕ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರೊಫೆಸರ್ ...
READ MORE