ನಮ್ಮ ಬದುಕು-ಬೆಟಗೇರಿ ಕೃಷ್ಣಶರ್ಮ ಅವರ 3ನೇ ಕಥಾ ಸಂಕಲನ. ಇಲ್ಲಿ ಒಟ್ಟು 6 ಕಥೆಗಳಿವೆ. ಬಡತನದ ಬಾಳು, ಸಂಸಾರದ ಚಿತ್ರ ಇದಕ್ಕೂ ಮೊದಲು ಬಂದ ಕಥೆಗಳ ಸಂಕಲನಗಳು. ಇಲ್ಲಿಯ ಯಾವ ಕಥೆಯೂ ಆಕಾಶದ ಕುಸುಮಕ್ಕೆ ಕೈ ಒಡ್ಡುವುದಿಲ್ಲ. ಮರೀಚಿಕೆಗೆ ಬೆನ್ನು ಹತ್ತುವುದಿಲ್ಲ. ನಮ್ಮ ನಿಮ್ಮಂತೆ ಸಾಮಾನ್ಯವಾಗಿ ಬದುಕಿದ ಜನ-ಜೀವನ ಚಿತ್ರವಿದೆ. ಆದ್ದರಿಂದ, ಈ ಕಥೆಗಳ ಸಂಕಲನಕ್ಕೆ ‘ನಮ್ಮ ಬದುಕು’ ಎಂದು ಹೆಸರಿಸಲಾಗಿದೆ ಎಂದು ಲೇಖಕ ಬೆಟಗೇರಿ ಕೃರ್ಷಶರ್ಮರು ಆರಂಭದಲ್ಲೇ ಸ್ಪಷ್ಟಪಡಿಸಿದ್ದಾರೆ.
ಇಲ್ಲಿಯ ಭಾಷೆ ಉತ್ತರ ಕರ್ನಾಟಕದ ದೇಸಿ ನುಡಿಯನ್ನು ಅನುಸರಿಸಿದೆ. ಕಥಾ ಸಂದರ್ಭದ ಹಿನ್ನೆಲೆಯಲ್ಲಿ ಈ ದೇಸಿ ನುಡಿಗಳು ಅರ್ಥವಾಗುತ್ತವೆ. ಮನೋವಿಜ್ಞಾನಿ ಸಿಗ್ಮಂಡ್ ಪ್ರಾಯ್ಡ್ ನ ಲಿಬಿಡೋ; ಮನುಷ್ಯನ ವರ್ತನೆಗೆ ಮೂಲ ಕಾರಣ . ಈತ ವಿವರಿಸಿದ ಎರಡು ಬಗೆಯ ಕಾಮಗಳ ಪೈಕಿ ಒಂದು-ಆಹಾರೇಚ್ಛೆ ಹಾಗೂ ಲೈಂಗಿಕ ಕಾಮನೆ. ಇವುಗಳ ಸತ್ಯದರ್ಶನವೇ ಕಥೆಗಳಿಗೆ ವಸ್ತುಗಳಾಗಿವೆ ಎಂದು ಲೇಖಕರು ಹೇಳಿದ್ದಾರೆ.
ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ 1900ರ ಏಪ್ರಿಲ್ 16ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ.. ಕೃಷ್ಣಶರ್ಮರು 12ನೇ ವರ್ಷದವನಿರುವಾಗ ತಂದೆ, 15ನೇ ವರ್ಷಕ್ಕೆ ಅಣ್ಣ ಹಣಮಂತರಾಯ, 18ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೆ ತಮ್ಮ 14ನೇ ವಯಸ್ಸಿನಲ್ಲಿ ವಿಷಮಶೀತ ಜ್ವರ ಹಾಗೂ 15ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. 1928ರಲ್ಲಿ ತುಳಸೀಬಾಯಿಯೊಂದಿಗೆ ಮದುವೆ. ಕೃಷ್ಣಶರ್ಮರು 56 ವಯಸ್ಸಿನವರಿದ್ದಾಗ ಮಗಳು ಹಾಗೂ ಮರು ವರ್ಷವೇ ಪತ್ನಿ ತೀರಿ ಹೋದರು. 5ನೇ ತರಗತಿವರೆಗೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ, ಕಂಪಿಸುವ ಕೈ-ಕಾಲುಗಳೊಂದಿಗೆ 5 ...
READ MORE