ನಂಬಿಕೆಗಳು

Author : ಕೃಷ್ಣ ಮಾಸಡಿ

Pages 104

₹ 16.00




Year of Publication: 1986
Published by: ಅಕ್ಷರ ಪ್ರಕಾಶನ
Address: ಸಾಗರ ,ಶಿವಮೊಗ್ಗ ಜಿಲ್ಲೆ -577401

Synopsys

'ನಮ್ಮ ಓ.ಸಿ. ಆಟಗಳ ಬಗ್ಗೆ ಒಂದು ಕಥೆ ಬರೆಯಬೇಕು' ಅಂದು ಕೊಂಡೆ, ನಂತರ ಭಾರತಕ್ಕೆ ಬಂದ ನಂತರವೂ 'ಕಥೆ' ಯ, 'ಮೂಢನಂಬಿಕೆ' ಯ ಗುಂಗು ಹೋಗಲಿಲ್ಲ. ಏಕೆಂದರೆ ನಾನು ಒಮ್ಮೆ ಈ ಓ.ಸಿ. ಆಟದ ಸೆಳೆತಕ್ಕೆ ಒಳ ಅದೇ ವರ್ಷದ ನವೆಂಬರ್ ತಿಂಗಳಲ್ಲಿ ಹದಿನೈದು ದಿನ ಕುಳಿತು, * ನಂಬಿಕೆಗಳು " ನ್ನು ಬರೆದು ಮುಗಿಸಿದೆ. “ಸುಧಾ ಕಾದಂಬರಿ ಸ್ಪರ್ಧೆ" ಗೆ ಕಳುಹಿಸಿ ಕೊಟ್ಟೆ. ಬಹುಮಾನ ಬಂತು. ಎಂದು ಲೇಖಕರು ಪುಸ್ತಕದ ಬಗ್ಗೆ ತಿಳಿಸಿದ್ದಾರೆ.

About the Author

ಕೃಷ್ಣ ಮಾಸಡಿ

ಹೊನ್ನಾಳಿ ತಾಲ್ಲೂಕಿನ ಮಾಸಡಿಯಲ್ಲಿ ಜನಿಸಿದ ಕೃಷ್ಣ ಮಾಸಡಿಯವರು ಪತ್ರಕರ್ತರಾಗಿ, ಸಾಹಿತಿಯಾಗಿ, ಚಲನಚಿತ್ರ ನಿರ್ದೇಶಕರಾಗಿ ತಮ್ಮ ಪ್ರತಿಭೆಯನ್ನು ಕಾಣಿಸಿದ್ದಾರೆ. 'ಲಂಕೇಶ್ ಪತ್ರಿಕೆ'ಯಲ್ಲಿ ಆರಂಭಿಕ ವರದಿಗಾರರಾಗಿ, ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.ಕರ್ನಾಟಕ ಸರ್ಕಾರದ ಚಲನಚಿತ್ರ ಸಹಾಯಧನ (2012) ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರೂ ಆಗಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಯು.ಆರ್. ಅನಂತಮೂರ್ತಿಯವರ 'ಅವಸ್ಥೆ' ಕಾದಂಬರಿ ಆಧಾರಿತ ಚಲನಚಿತ್ರವನ್ನು ನಿರ್ದೇಶಿಸಿದ್ದವರು ಮಾಸಡಿಯವರು. ತಮ್ಮದೇ ಕಾದಂಬರಿ 'ನಂಬಿಕೆಗಳು ಆಧರಿಸಿದ ಚಲನಚಿತ್ರವನ್ನೂ ನಿರ್ದೇಶಿಸಿದವರು. ಎಸ್. ನಿಜಲಿಂಗಪ್ಪ, ಡಿ. ದೇವರಾಜ ಅರಸು, ಪು.ತಿ.ನ., ಜಿ.ಎಸ್.ಎಸ್., ...

READ MORE

Related Books