ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ನಮಗೆಷ್ಟು ಜ್ನಾನ ಬೇಕು. ಜಗತ್ತಿನಲ್ಲಿ ಬದುಕಲು ಎಷ್ಟು ಮತ್ತು ಯಾವ ರೀತಿಯ ಜ್ನಾನ ಬೇಕು. ವ್ಯವಹಾರ ಜ್ನಾನವೊಂದೇ ಸಾಕೆ ಅಥವಾ ಜೀವನ ಸಾರ್ಥಕತೆ ಪಡೆಯುವ ಜ್ನಾನವೂ ಅಗತ್ಯವೆ ಎಂಬ ಜಿಜ್ನಾಸೆ ನಡೆಸುವ ಕೃತಿ ಇದು. ಜಗತ್ತಿನ ಸರ್ವಶ್ರೇಷ್ಠ ಕಥೆಗಳೆಂದು ಪರಿಗಣಿಸಲಾದ ಅಮರ ಜಾತಕ ಕಥೆಗಳನ್ನು ಇಲ್ಲಿ ಸಂಕಲಿಸಲಾಗಿದೆ. ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ.